ಕಾಂಗ್ರೆಸ್ ಸಂಸದ ಶಶಿ ತರೂರ್ ಯಾವಾಗಲೂ ಇಂಗ್ಲಿಷ್ ಮೇಲಿನ ಪಾಂಡಿತ್ಯದಿಂದ ನೋಡುಗರನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ.
ಕೆಲವೊಮ್ಮೆ ತರೂರ್ ಬಳಸುವ ಇಂಗ್ಲಿಷ್ ಪದಗಳು ಬಹಳ ಉದ್ದವಾಗಿಯೂ, ಕ್ಲಿಷ್ಟವಾಗಿಯೂ ಇದ್ದು ನೆಟ್ಟಿಗರು ಅವುಗಳ ಬಗ್ಗೆಯೇ ಹ್ಯಾಶ್‌ಟ್ಯಾಗ್ ಟ್ರೆಂಡ್ ಸೃಷ್ಟಿ ಮಾಡುವಂತೆ ಇರುತ್ತವೆ. ಸನ್ನಿವೇಶಗಳನ್ನು ವಿವರಿಸುವಾಗ ಇವರು ತಮ್ಮದೇ ಶೈಲಿಯ ವ್ಯಾಕರಣವನ್ನೂ ಬಳಸುವ ಮೂಲಕ ಸಖತ್ ಮಿಂಚುತ್ತಲೇ ಇರುತ್ತಾರೆ.
ಇದೀಗ ಆಸ್ಟ್ರೇಲಿಯನ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ ತಂಡದ ಗೆಲುವನ್ನು ತಮ್ಮದೇ ಶೈಲಿಯಲ್ಲಿ ವರ್ಣಿಸಿರುವ ತರೂರ್, ಇಂಗ್ಲಿಷ್ ಪದಕೋಶದಲ್ಲಿ ಈ ಥರದ್ದೂ ಒಂದು ಶಬ್ದವಿದೆ ಎಂದು ತೋರಿಸಿಕೊಟ್ಟಿದ್ದಾರೆ.
’ಎಪಿಕ್ಯಾರಿಕ್ಯಾಸಿ’ ಎಂಬ ಶಬ್ದವನ್ನು ಬಳಸುವ ಮೂಲಕ, ಭಾರತ ಟೆಸ್ಟ್ ಸರಣಿಯಲ್ಲಿ 0-4ರಲ್ಲಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದ ಐವರು ಮಾಜಿ ಕ್ರಿಕೆಟರುಗಳಿಗೆ ಕಾಲೆಳೆದಿದ್ದಾರೆ ತರೂರ್. ಇತರರ ದುರದೃಷ್ಟವನ್ನು ಅಣಕ ಮಾಡಿ ಸಂತೋಷ ಪಡುವ ಚಾಳಿಗೆ ಎಪಿಕ್ಯಾರಿಕ್ಯಾಸಿ ಎನ್ನಲಾಗುತ್ತದೆ.