ಮನಿಲಾ(ಫಿಲಿಪೈನ್ಸ್): ಬಾಸ್ಕೆಟ್ ಬಾಲ್ ವಿಶ್ವಕಪ್ ಪಂದ್ಯದ ವೇಳೆ ಎದುರಾಳಿ ಆಟಗಾರನ ಹೊಡೆತದಿಂದ ಗಾಯಗೊಂಡ ಬಾಸ್ಕೆಟ್ ಬಾಲ್ ಆಟಗಾರ ಕಿಡ್ನಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.
ಭಾನುವಾರ ದಕ್ಷಿಣ ಸುಡಾನ್ ಮತ್ತು ಸರ್ಬಿಯಾ ತಂಡಗಳ ನಡುವೆ ಪಂದ್ಯ ನಡೆಯುವಾಗ ಘಟನೆ ನಡೆದಿದೆ. ಪಂದ್ಯ ಮುಗಿಯಲು ಎರಡು ನಿಮಿಷ ಇರುವಾಗ ಸರ್ಬಿಯಾದ ಬೋರಿಸಾ ಸಿಮಾನಿಕ್ ಅವರ ಹೊಟ್ಟೆಯ ಕೆಳ ಭಾಗಕ್ಕೆ ಸುಡಾನ್ ನ ನುನಿ ಒಮೊಟ್ ಅವರ ಕೈ ಬಲವಾಗಿ ತಾಗಿದೆ. ಈ ವೇಳೆ ನೋವಿನಿಂದ ಚೀರಾಡಿದ ಸಿಮಾನಿಕ್ ಅಸ್ವಸ್ಥಗೊಂಡಿದ್ದು, ಅವರು ನೋವಿನಿಂದ ಕೋರ್ಟ್ ನಲ್ಲೇ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರೀಕ್ಷಿಸಿದ ವೈದ್ಯರು ಒಂದು ಕಿಡ್ನಿ ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದಾರೆ. ನಂತರ ಶಸ್ತ್ರ ಚಿಕಿತ್ಸೆ ನಡೆಸಿ ಒಂದು ಕಿಡ್ನಿ ಹೊರತೆಗೆಯಲಾಗಿದೆ. ಸರ್ಬಿಯಾದ ಬಾಸ್ಕೆಟ್‌ಬಾಲ್ ಆಟಗಾರ ಬೋರಿಸಾ ಸಿಮಾನಿಕ್ ಅವರು FIBA ವಿಶ್ವಕಪ್‌ನಲ್ಲಿ ಗಾಯಗೊಂಡ ನಂತರ ಮೂತ್ರಪಿಂಡ ಕಳೆದುಕೊಂಡಿದ್ದಾರೆ.