ಟೋಕಿಯೋ: ಈಗಂತೂ ಕೊರೊನಾ ವೈರಸ್ ಬಹುವಾಗಿ ಕಾಡುತ್ತಿದೆ. ಜೀವ ಒಂದು ಕಡೆ ಹೋಗುತ್ತಿದ್ದರೆ, ಮತ್ತೊಂದು ಕಡೆ ಜೀವನ ಹೋಗುತ್ತಿದೆ. ನಾಲ್ಕು ಜನ ಹೆಚ್ಚಾಗಿ ಸೇರುವ ಯಾವುದೇ ಕೆಲಸ, ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆ ಮಾಡುವುದು ತುಸು ಕಷ್ಟವೇ. ಅದರಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೆಂದರೆ ಇನ್ನೂ ಕಷ್ಟ. ಆದರೆ, ಈ ಹೊತ್ತಿನಲ್ಲಿ ಟೋಕಿಯೋದಲ್ಲಿ ಬೇಸ್ ಬಾಲ್ ಗೆ ಹೊಸ ಚಿಯರ್ ಗರ್ಲ್ಸ್ ಬಂದಿದ್ದಾರೆ..!
ಹೌದು. ಇಲ್ಲಿ ಆಟಗಾರರು ಹಾಗೂ ಪ್ರೇಕ್ಷಕರನ್ನು ಚಿಯರಪ್ ಮಾಡಲು ರೋಬೋಗಳು ಬಂದಿವೆ. ಇವು ಸಖತ್ ಡಾನ್ಸ್ ಕೂಡಾ ಮಾಡುತ್ತವೆ. ನಿಪ್ಪಾನ್ ಪ್ರೊಫೆಶನಲ್ ಬೇಸ್ ಬಾಲ್ ಲೀಗ್ ನಲ್ಲಿ ಫುಕವೋಕಾ ಹಾಕ್ಸ್ ಹಾಗೂ ರಾಕುಟನ್ ಈಗಲ್ಸ್ ತಂಡಗಳ ನಡುವೆ ನಡೆದ ಪಂದ್ಯದ ವೇಳೆ ರೋಬೋಗಳು ಸ್ಟೆಪ್ ಹಾಕಿ ಚಿಯರ್ ಹೇಳಿವೆ.
ಸ್ವಲ್ಪ ಮಾನವ ಹಾಗೂ ಶ್ವಾನದ ರೀತಿಯಲ್ಲಿ ಈ ರೋಬೋವನ್ನು ವಿನ್ಯಾಸ ಮಾಡಲಾಗಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಇಲ್ಲಿ ರೋಬೋಗಳು ಡಾನ್ಸ್ ಮಾಡುವುದಲ್ಲದೆ, ಪ್ರೇಕ್ಷಕ ಸ್ಥಾನವನ್ನೂ ತುಂಬಿವೆ.