ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 78 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ 2-1 ಅಂತರದಿಂದ ಏಕದಿನ ಸರಣಿ ಜಯಿಸಿದೆ. ವಿರಾಟ್ ಕೊಹ್ಲಿ ನಂತರ ದಕ್ಷಿಣ ಆಫ್ರಿಕಾದಲ್ಲಿ ODI ಸರಣಿಯನ್ನು ಗೆದ್ದ ಎರಡನೇ ನಾಯಕ ಕೆಎಲ್ ರಾಹುಲ್ ಅವರಾಗಿದ್ದಾರೆ.
ಪಾರ್ಲ್ ನ ಬೋಲ್ಯಾಂಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸಂಜು ಸ್ಯಾಮ್ಸನ್ ಅವರ ಚೊಚ್ಚಲ ಶತಕದ ನೆರವಿನಿಂದ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಭಾರತದ ಪರ ರಜತ್ ಪಾಟೀದಾರ್ 22, ಸಾಯಿ ಸುದರ್ಶನ್ 10, ಸಂಜು ಸ್ಯಾಮ್ಸನ್ 108, ಕೆಎಲ್ ರಾಹುಲ್ 21, ತಿಲಕ್ ವರ್ಮಾ 52, ರಿಂಕು ಸಿಂಗ್ 38, ಅಕ್ಷರ್ ಪಟೇಲ್ 1, ವಾಷಿಂಗ್ಟನ್ ಸುಂದರ್ 14, ಆರ್ಶ್ ದೀಪ್ ಸಿಂಗ್ ಅಜೇಯ 7, ಆವೇಶ್ ಖಾನ್ ಅಜೇಯ 1 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರವಾಗಿ ಬೇರುನ್ ಹೆಂಡ್ರಿಕ್ಸ್ 3, ನಾಂದ್ರೆ ಬರ್ಗರ್ 2 ವಿಕೆಟ್ ಪಡೆದರು.
297 ರನ್ ಗೆಲುವಿನ ಗುರಿ ಪಡೆದ ದಕ್ಷಿಣಾ ಆಫ್ರಿಕಾ 45.5 ಓವರ್ ಗಳಲ್ಲಿ 218 ರನ್ ಗೆ ಆಲೌಟ್ ಆಯಿತು. ಟೋನಿ ಡಿ ಜೋರ್ಜಿ 81 ರನ್ ಗಳಿಸಿದರು. ಆರ್ಶ್ ದೀಪ್ ಸಿಂಗ್ 4, ಆವೇಶ್ ಖಾನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು.