
ನವದೆಹಲಿ: ದೆಹಲಿ ರಣಜಿ ತಂಡದ ಮಾಜಿ ಆಲ್-ರೌಂಡರ್ ಸಂಜಯ್ ದೋಬಲ್(52) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಅನಾರೋಗ್ಯದ ಕಾರಣ ಸಂಜಯ್ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಚಿಕಿತ್ಸೆ ಮುಂದುವರೆಸಿದ್ದರೂ, ಫಲಕಾರಿಯಾಗದೆ ಸಂಜಯ್ ಮೃತಪಟ್ಟಿದ್ದಾರೆ.
ರಣಜಿ ಆಟಗಾರರಾಗಿರುವ ಸಂಜಯ್ ಇಬ್ಬರು ಪುತ್ರರು, ಪತ್ನಿಯನ್ನು ಅಗಲಿದ್ದಾರೆ. ಬ್ಯಾಟ್ಸ್ ಮನ್ ಆಗಿ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ ಅವರು ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಸಹ ಆಟಗಾರರಾಗಿದ್ದ ಮಿಥುನ್ ಮನಾಸ್ ತಿಳಿಸಿದ್ದಾರೆ.