ಭಾರತೀಯ ಟೆನಿಸ್ ಸೂಪರ್ ಸ್ಟಾರ್ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಚ್ಛೇದನದ ವದಂತಿಗಳ ಮಧ್ಯೆ, ಇಬ್ಬರ ನಡುವಿನ ವಿಷಯಗಳು ಉತ್ತಮವಾಗಿವೆ ಎಂದು ಹೇಳಲಾಗಿದೆ.
ವಿಚ್ಛೇದನದ ವದಂತಿಗಳ ನಡುವೆ ಸಾನಿಯಾ, ಶೋಯೆಬ್ ‘ದಿ ಮಿರ್ಜಾ ಮಲಿಕ್ ಶೋ’ ನಡೆಸಿಕೊಡಲಿದ್ದಾರೆ. ಒಟಿಟಿ ಪ್ಲಾಟ್ ಫಾರ್ಮ್ ಉರ್ದು ಫ್ಲಿಕ್ಸ್ ಸಾನಿಯಾ ಮತ್ತು ಶೋಯೆಬ್ ತಮ್ಮ ‘ದಿ ಮಿರ್ಜಾ ಮಲಿಕ್ ಶೋ’ ಎಂಬ ಶೀರ್ಷಿಕೆಯೊಂದಿಗೆ ಬರುತ್ತಿದ್ದಾರೆ ಎಂದು ಘೋಷಿಸಿದೆ.
ಪ್ರಕಟಣೆಯ ಜೊತೆಗೆ, ಉರ್ದುಫ್ಲಿಕ್ಸ್ “ದಿ ಮಿರ್ಜಾ ಮಲಿಕ್ ಶೋ ಅತಿ ಶೀಘ್ರದಲ್ಲೇ ಉರ್ದು ಫ್ಲಿಕ್ಸ್ ನಲ್ಲಿ ಮಾತ್ರ ಎಂಬ ಶೀರ್ಷಿಕೆಯೊಂದಿಗೆ ಸಾನಿಯಾ ಮತ್ತು ಶೋಯೆಬ್ ಅವರ ಚಿತ್ರವನ್ನು ಸಹ ಹಂಚಿಕೊಂಡಿದೆ.
ಪೋಸ್ಟರ್ ನಲ್ಲಿ, ಹಸಿರು ಗೋಡೆಯ ಮುಂದೆ ಶೋಯೆಬ್ ಭುಜದ ಮೇಲೆ ಸಾನಿಯಾ ಅವರ ಕೈಯೊಂದಿಗೆ ಒಟ್ಟಿಗೆ ನಿಂತಿರುವುದನ್ನು ಕಾಣಬಹುದು.
ಇದೇ ವೇಳೆ ಇದು ನೆಟ್ಟಿಗರಲ್ಲಿ ಗೊಂದಲ ಮೂಡಿಸಿದೆ. ಇದು ಶೋ ಪ್ರಚಾರದ ಸಾಹಸವೇ? ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಅವರ ವಿಚ್ಛೇದನ ವದಂತಿ ಪ್ರಚಾರದ ಉದ್ದೇಶಕ್ಕಾಗಿ. ನಾಚಿಕೆಗೇಡು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಒಬ್ಬರನ್ನೊಬ್ಬರು ಕ್ಷಮಿಸಿ, ಒಬ್ಬರಿಗೊಬ್ಬರು ಜೊತೆಯಾಗಿರಿ, ಇಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣುತ್ತೀರಿ ಎಂದು ಇನ್ನೊಬ್ಬರು ಹೇಳಿದ್ದಾರೆ.
ದಂಪತಿಗಳ ವಿಚ್ಛೇದನದ ಬಗ್ಗೆ ಊಹಾಪೋಹಗಳು ಅಂತರ್ಜಾಲದಲ್ಲಿ ಹರಿದಾಡಿವೆ. ಸಾನಿಯಾ ತನ್ನ ಇನ್ ಸ್ಟಾಗ್ರಾಮ್ ಹ್ಯಾಂಡಲ್ ನಿಂದ ಗೂಡಾರ್ಥದ ಪೋಸ್ಟ್ ವೊಂದನ್ನು ಹಂಚಿಕೊಂಡ ನಂತರ ಡೈವೋರ್ಸ್ ವಿಚಾರದ ಬಗ್ಗೆ ಚರ್ಚೆಯಾಗಿದೆ.
ಈ ಹಿಂದೆ ಶೋಯೆಬ್ ಮಲಿಕ್ ಜೊತೆಗೆ ದುಬೈನ ಪಾಮ್ ಜುಮೇರಾದಲ್ಲಿ ವಿಲ್ಲಾದಲ್ಲಿ ವಾಸಿಸುತ್ತಿದ್ದ ಸಾನಿಯಾ ಇತ್ತೀಚೆಗೆ ದುಬೈನ ಬೇರೆ ಪ್ರದೇಶದಲ್ಲಿ ಹೊಸ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಸಾನಿಯಾ ಮತ್ತು ಶೋಯೆಬ್ ಇತ್ತೀಚೆಗೆ ಸಾನಿಯಾ ಸಹೋದರಿ ಅನಮ್ ಮಿರ್ಜಾ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಕಾಣಿಸಿಕೊಂಡಿದ್ದರು. ವಿಡಿಯೋದಲ್ಲಿ ಸಾನಿಯಾ ಮತ್ತು ಶೋಯೆಬ್ ಅವರ ಮಗ ಇಜಾನ್ ಹುಟ್ಟುಹಬ್ಬದ ಪಾರ್ಟಿ ಆಚರಿಸುತ್ತಿರುವಾಗ ಈ ಜೋಡಿ ಸೆರೆಹಿಡಿಯಲಾಗಿದೆ.
ಶೋಯೆಬ್ ತಮ್ಮ ಇನ್ ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಪಾರ್ಟಿಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದರೆ, ಸಾನಿಯಾ ಅದಕ್ಕೆ ಸಂಬಂಧಿಸಿದ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ.
ಶೋಯೆಬ್ ಮತ್ತು ಸಾನಿಯಾ 2010 ರಲ್ಲಿ ವಿವಾಹವಾದರು ಮತ್ತು ಅಂದಿನಿಂದ ದುಬೈನಲ್ಲಿ ನೆಲೆಸಿದ್ದಾರೆ. 2018 ರಲ್ಲಿ ಮಗ ಇಜಾನ್ ಜನಿಸಿದ್ದು, ಈಗ ತಮ್ಮ 12 ವರ್ಷಗಳ ಸುದೀರ್ಘ ದಾಂಪತ್ಯ ಕೊನೆಗೊಳಿಸಿದ್ದಾರೆ ಎಂಬ ವದಂತಿ ಹರಡಿವೆ. ವದಂತಿಗಳ ಬಗ್ಗೆ ದಂಪತಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.