ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ಇದರಲ್ಲಿ ಸಾನಿಯಾ ತನ್ನ 2 ವರ್ಷದ ಮಗನಿಗೆ ಟ್ರಾಫಿಕ್ ಸಿಗ್ನಲ್ ಬಗ್ಗೆ ಪಾಠ ಮಾಡಿದ್ದಾರೆ.
2010 ರಲ್ಲಿ ಪಾಕಿಸ್ತಾನ ಬ್ಯಾಟ್ಸಮನ್ ಶೋಯಬ್ ಮಲಿಕ್ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಸಾನಿಯಾ ದಂಪತಿಗೆ 2 ವರ್ಷದ ಇಝಾನ್ ಮಿರ್ಜಾ ಮಲ್ಲಿಕ್ ಎಂಬ ಪುತ್ರನಿದ್ದಾನೆ. ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸಾನಿಯಾ ಟ್ರಾಫಿಕ್ ಸಿಗ್ನಲ್ ಬಗ್ಗೆ ಮಗನಿಗೆ ಪಾಠ ಮಾಡಿದ್ದಾಳೆ.
ಪುಟ್ಟ ವಿಡಿಯೋದಲ್ಲಿ ಪುತ್ರನಿಗೆ ಸಾನಿಯ ಹಸಿರು ದೀಪ ಎಂದರೇನು? ಎಂದು ಕೇಳುತ್ತಾರೆ. ಅದಕ್ಕೆ ಇಝಾನ್ ಹಸಿರು ದೀಪ ಎಂದರೆ ಹೋಗು ಎಂದರ್ಥ ಎಂದು ಹೇಳುತ್ತಾನೆ. ಹಳದಿ ದೀಪ ಅಂದ್ರೆ ಏನು ಎಂದು ಕೇಳ್ತಿದ್ದಂತೆಯೇ ಕಾಯಬೇಕು ಎಂದು ಇಝಾನ್ ಉತ್ತರ ನೀಡಿದ್ದಾನೆ, ಕೆಂಪು ದೀಪ ಯಾವುದರ ಸಂಕೇತ ಎಂದು ಕೇಳಿದ್ರೆ ನಿಲ್ಲಿ ಎಂದರ್ಥ ಎಂದು 2 ವರ್ಷದ ಪೋರ ಹೇಳಿದ್ದಾನೆ.
https://www.instagram.com/p/CIValI_Hr2f/?utm_source=ig_web_copy_link