ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮದುವೆಯ 11ನೇ ವಾರ್ಷಿಕೋತ್ಸವವನ್ನು ಭಾನುವಾರ ಆಚರಿಸಿಕೊಂಡಿದ್ದಾರೆ. ಧೋನಿ ಮತ್ತು ಸಾಕ್ಷಿ ಜುಲೈ4,2010 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವಿಶೇಷ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಅಭಿಮಾನಿಗಳು ಅವರಿಗೆ ಶುಭ ಕೋರಿದರು. ಈ ವೇಳೆ ಸಾಕ್ಷಿ, ಧೋನಿಗೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್, ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಧೋನಿ ಪತ್ನಿ ಸಾಕ್ಷಿ, ಧೋನಿಯ ಕೆಲ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಧೋನಿ ಹೇಗೆ ಸಮಯ ಕಳೆಯುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಧೋನಿ ವಿಡಿಯೋ ಗೇಮ್ಗಳನ್ನು ಆಡಲು ಇಷ್ಟಪಡುತ್ತಾರಂತೆ. ಪಬ್ಜಿ ಮತ್ತು ಕಾಲ್ ಆಫ್ ಡ್ಯೂಟಿಯಂತಹ ಆಟಗಳನ್ನು ಆಡುತ್ತಾರೆ ಎಂದು ಸಾಕ್ಷಿ ಹೇಳಿದ್ದಾರೆ.
ಸದಾ ಮನಸ್ಸನ್ನು ಸಕ್ರಿಯವಾಗಿಟ್ಟುಕೊಳ್ಳುವ ಧೋನಿ ಯಾವಾಗ್ಲೂ ವಿಶ್ರಾಂತಿ ಪಡೆಯುವುದಿಲ್ಲವಂತೆ. ವಿಡಿಯೋ ಗೇಮ್ ಮೂಲಕ ತಮ್ಮ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಬಯಸ್ತಾರೆಂದು ಹೇಳಿದ್ದಾರೆ. ವಿಶೇಷವೆಂದ್ರೆ ಧೋನಿ, ನಿದ್ರೆಯಲ್ಲೂ ಪಬ್ಜಿ ಬಗ್ಗೆ ಮಾತನಾಡ್ತಾರಂತೆ. ಪಬ್ಜಿ ನನ್ನ ಬೆಡ್ ರೂಮ್ ಪ್ರವೇಶ ಮಾಡಿದೆ. ನನ್ನ ಜೊತೆ ಮಾತನಾಡ್ತಿದ್ದಾರೆಂದು ನಾನು ಭಾವಿಸಿದ್ರೆ ಅವರು ಪಬ್ಜಿ ಆಟದ ವೇಳೆ ಮಾತನಾಡ್ತಿರ್ತಾರೆಂದು ಸಾಕ್ಷಿ ಹೇಳಿದ್ದಾರೆ. ನಿದ್ರೆಯಲ್ಲೂ ಧೋನಿ ಈ ಬಗ್ಗೆ ಮಾತನಾಡ್ತಾರೆಂದು ಸಾಕ್ಷಿ ಹೇಳಿಕೊಂಡಿದ್ದಾರೆ.