ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದಿದೆ. ಸೈನಾ ನೆಹ್ವಾಲ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಬ್ಯಾಡ್ಮಿಂಟನ್ ಪಂದ್ಯಾವಳಿಗಾಗಿ ಸೈನಾ ಥೈಲ್ಯಾಂಡ್ ನಲ್ಲಿದ್ದಾರೆ. ಸದ್ಯ ಅಲ್ಲಿಯೇ ಸೈನಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಬಂದಿರುವುದು ಸೈನಾ ನೆಹ್ವಾಲ್‌ಗೆ ದೊಡ್ಡ ಹಿನ್ನಡೆಯಾಗಿದೆ. ಯೋನೆಕ್ಸ್ ಥೈಲ್ಯಾಂಡ್ ಓಪನ್ ಜನವರಿ 12 ರಿಂದ 17 ರವರೆಗೆ ನಡೆಯಲಿದೆ. ಇದರ ನಂತರ, ಟೊಯೋಟಾ ಥೈಲ್ಯಾಂಡ್ ಓಪನ್ ಜನವರಿ 19 ರಿಂದ 24 ರವರೆಗೆ ನಡೆಯಲಿದೆ. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ ಜನವರಿ 27 ರಿಂದ 31 ರವರೆಗೆ ನಡೆಯಲಿದೆ. ಆದ್ರೆ ಸೈನಾಗೆ ಕೊರೊನಾ ಕಾಣಿಸಿಕೊಂಡ ಕಾರಣ ಅವ್ರಿಗೆ ವಿಶ್ರಾಂತಿ, ಸಾಮಾಜಿಕ ಅಂತರ ಅನಿವಾರ್ಯವಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಕಳೆದ 10 ತಿಂಗಳಿಂದ ಯಾವುದೇ ಪಂದ್ಯಾವಳಿ ನಡೆದಿರಲಿಲ್ಲ. ದೊಡ್ಡ ಬ್ರೇಕ್ ನಂತ್ರ ಸೈನಾ ಥೈಲ್ಯಾಂಡ್ ಪಂದ್ಯಾವಳಿ ಮೂಲಕ ಮೈದಾನಕ್ಕಿಳಿಯಲು ಸಜ್ಜಾಗಿದ್ದರು. ಇದಕ್ಕೂ ಮೊದಲು ಪ್ರೋಟೋಕಾಲ್ ಬಗ್ಗೆ ಸೈನಾ ಸಾಕಷ್ಟು ಟ್ವಿಟ್ ಮಾಡಿದ್ದರು. ಥೈಲ್ಯಾಂಡ್ ನಲ್ಲಿ ತರಬೇತುದಾರರನ್ನು ಭೇಟಿಯಾಗಲು ಅವಕಾಶ ನೀಡ್ತಿರಲಿಲ್ಲ. ಕ್ರೀಡಾ ಸಿಬ್ಬಂದಿ ಭೇಟಿಗೂ ಅವಕಾಶ ನೀಡ್ತಿರಲಿಲ್ಲವೆಂದು ಸೈನಾ ಹೇಳಿದ್ದರು. ಈಗ ಕೊರೊನಾ ಕಾಣಿಸಿಕೊಂಡ ಕಾರಣ 30 ವರ್ಷದ ಸೈನಾ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ.