ಆಸ್ಟ್ರೇಲಿಯಾದ ಅಡಿಲೆಡ್ ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ತಂಡದ ಅನಿರೀಕ್ಷಿತ ಕುಸಿತದ ಬಗ್ಗೆ ಎಲ್ಲೆಲ್ಲಿಯೂ ಚರ್ಚೆ ಪ್ರಾರಂಭವಾಗಿದೆ. ಹಿರಿಯ ನಿವೃತ್ತ ಕ್ರಿಕೆಟರ್ ಗಳು ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.
“ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಯಾವ ರೀತಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿದರು. ಅವರು ಡ್ರೈವರ್ ಸೀಟ್ ನಲ್ಲಿದ್ದರು. ಆದರೆ, ಆಸ್ಟ್ರೇಲಿಯಾ ಆಟಗಾರರು ಅತ್ಯುತ್ತಮವಾಗಿ ಕಂ ಬ್ಯಾಕ್ ಮಾಡಿದರು. ಇದೇ ಟೆಸ್ಟ್ ಕ್ರಿಕೆಟ್ ನ ಬ್ಯೂಟಿ. ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ತುಂಬಾ ಹಿಂದೆ ಬಿದ್ದಿತು. ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
“49204084041- ಇದು ಒಟಿಪಿ ಅಲ್ಲ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತೀಯ ಆಟಗಾರರ ಬ್ಯಾಟಿಂಗ್ ಸೀಕ್ವೆನ್ಸ್” ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
“ನಾನು ಎದ್ದು ನೋಡಿದೆ. ಸ್ಕೋರ್ 369 ಎಂದುಕೊಂಡೆ ಕಣ್ಣೊರೆಸಿಕೊಂಡು ನೋಡಿದೆ. ಅದು 36/9 ಆಗಿತ್ತು. ನನಗೆ ನಂಬಲು ಸಾಧ್ಯವಾಗಿಲ್ಲ. ಮತ್ತೆ ನಿದ್ದೆ ಮಾಡಿದೆ” ಎಂದು ಪಾಕಿಸ್ತಾನಿ ಕ್ರಿಕೆಟಿಗ ಶೊಯಬ್ ಅಕ್ತರ್ ಹೇಳಿದ್ದಾರೆ.
“ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್. ಆದರೆ ಇದಕ್ಕಾಗಿ ಬ್ಯಾಟ್ಸ್ ಮನ್ ಗಳನ್ನು ಬೈಯ್ಯುವುದರಲ್ಲಿ ಅರ್ಥವಿಲ್ಲ. ಆಸ್ಟ್ರೇಲಿಯಾ ಬಾಲರ್ ಗಳ ಉತ್ತಮ ಬಾಲಿಂಗ್ ಪ್ರದರ್ಶನ” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.