ಮುಂಬೈ: ಭಾರತೀಯ ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡುಲ್ಕರ್ ಲಾಕ್‌ಡೌನ್ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಒಂದಲ್ಲ ಒಂದು ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಸೋಮವಾರ ಅವರು ಪೋಸ್ಟ್ ಮಾಡಿದ ಫೋಟೋ ಅಭಿಮಾನಿಗಳಿಗೆ ಖುಷಿ ನೀಡಿದೆ.
ಸ್ವಿಮಿಂಗ್ ಫೂಲ್ ಒಂದರಲ್ಲಿ ನಿಂತು ನೋಡುತ್ತಿರುವ ಫೋಟೋವನ್ನು ಅವರು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ‘ಹೂ ಸೆಡ್ ಮಂಡೆ, ಬ್ಲೂಸ್ ಆರ್ ಬ್ಯಾಡ್..? #ಮಂಡೆ ಮೋಟಿವೇಶನ್ ಎಂದು ಹ್ಯಾಶ್‌ಟ್ಯಾಗ್‌ನೊಂದಿಗೆ ಕ್ಯಾಪ್ಶನ್ ನೀಡಿದ್ದಾರೆ.
ಅವರ ಹಳೆಯ ಟೀಮ್ ಮೇಟ್ ಸುರೇಶ್ ರೈನಾ ಇಮೋಜಿ ಹಾಕಿ ತೆಂಡುಲ್ಕರ್ ಫೋಟೋ ಮೆಚ್ಚಿಕೊಂಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಫೋಟೋ ಲೈಕ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.
1989 ರ ನವೆಂಬರ್ 15 ರಂದು ಕರಾಚಿಯಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮುಂಬೈ ಮೂಲದ ಬಾಲಕ ರನ್ ಸುರಿಮಳೆ ಸುರಿಸಿ ಅಬ್ಬರಿಸಿದ್ದ. ಅವರೇ ಸಚಿನ್ ತೆಂಡುಲ್ಕರ್.
ಆಗ ಅವರಿಗೆ ಕೇವಲ 16 ವರ್ಷವಾಗಿತ್ತು. ಅಲ್ಲಿಂದ ದೇಶದ ಗಮನ ಸೆಳೆದ ಸಚಿನ್ ಹಿಂತಿರುಗಿ ನೋಡಲಿಲ್ಲ. ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಹೋದರು. ಅರ್ಜುನ, ಖೇಲ್ ರತ್ನ, ಪದ್ಮಶ್ರೀ, ಪದ್ಮಭೂಷಣ, ಭಾರತರತ್ನ ಪ್ರಶಸ್ತಿಗಳನ್ನೂ ಗಿಟ್ಟಿಸಿದರು. 2011 ರಲ್ಲಿ ಭಾರತ ವಿಶ್ವ ಕಪ್ ಗೆದ್ದ ತಂಡದ ಪ್ರಮುಖ ಆಕರ್ಷಣೆಯಾದರು. ಈಗ ಎಲ್ಲ ರೀತಿಯ ಕ್ರಿಕೆಟ್ ಪಂದ್ಯಾವಳಿಗಳಿಂದ ದೂರವಿರುವ ತೆಂಡುಲ್ಕರ್ ಅವರು ತಮ್ಮ ವಿಶ್ರಾಂತ ಜೀವನವನ್ನು ಮುಂಬೈನಲ್ಲಿ ಕಳೆಯುತ್ತಿದ್ದಾರೆ.
https://www.instagram.com/p/CH7p9TusDl_/?utm_source=ig_web_copy_link