ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಳಿ ಬಿಎಂಡಬ್ಲ್ಯು, ಫೆರಾರಿ, ನಿಸ್ಸಾನ್ ಜಿಟಿ-ಆರ್ ನಂತಹ ವಿಶ್ವದ ಅತ್ಯುತ್ತಮ ಕಾರುಗಳಿವೆ. ಕಾರುಗಳ ಮೇಲೆ ಅವರಿಗಿರುವ ಪ್ರೀತಿ ವಿಶ್ವಕ್ಕೆ ಗೊತ್ತು. ಆದ್ರೆ ಕ್ರಿಕೆಟ್ ವೃತ್ತಿ ಜೀವನ ಶುರು ಮಾಡಿದ ನಂತ್ರ ತಮ್ಮ ಹಣದಲ್ಲಿ ಮೊದಲು ಖರೀದಿ ಮಾಡಿದ್ದ ಕಾರನ್ನು ಸಚಿನ್ ಇನ್ನೂ ಮರೆತಿಲ್ಲ.
ಭಾರತೀಯ ಟೇಬಲ್ ಟೆನಿಸ್ ಆಟಗಾರ ಮುಡಿಟ್ ದಾನಿ ಅವರೊಂದಿಗೆ ಶೋ ಇನ್ ದಿ ಸ್ಪೋರ್ಟ್‌ಲೈಟ್‌ನಲ್ಲಿ ಮಾತನಾಡಿದ ಸಚಿನ್ ಆ ಕಾರು ನೆನೆದು ಭಾವುಕರಾದರು. ಈ ಸಂದರ್ಭದಲ್ಲಿ ಅವರು ವಿನಂತಿ ಮಾಡಿದ್ದಾರೆ. ಆ ಕಾರನ್ನು ಯಾರು ಖರೀದಿಸಿದ್ದರೂ ನನ್ನನ್ನು ಸಂಪರ್ಕಿಸಿ. ಭಾವನಾತ್ಮಕ ಕಾರಣಗಳಿಂದಾಗಿ ಕಾರನ್ನು ವಾಪಸ್ ಪಡೆಯಲು ಬಯಸುತ್ತಿದ್ದೇನೆ ಎಂದಿದ್ದಾರೆ.
ನಾನು ಮೊದಲು ಖರೀದಿಸಿದ್ದ ಕಾರು ಮಾರುತಿ 800. ಆದ್ರೆ ದುರಾದೃಷ್ಟವಶಾತ್ ಅದು ನನ್ನ ಬಳಿ ಇಲ್ಲ. ನಾನು ಅದನ್ನು ವಾಪಸ್ ಪಡೆಯಲು ಬಯಸುತ್ತಿದ್ದೇನೆ ಎಂದು ಸಚಿನ್ ಹೇಳಿದ್ದಾರೆ.