ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲದೆ, ವಿದೇಶಿ ಕ್ರಿಕೆಟ್ ತಂಡಗಳ ಅನೇಕ ಆಟಗಾರರ ಅಚ್ಚುಮೆಚ್ಚಿನ ಆಶ್ರಫ್ ಚಾಚಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕ್ರಿಕೆಟಿಗರು ಸ್ಟೇಡಿಯಂನಲ್ಲಿ ಬೀಸಿ ಬೀಸಿ ಬೌಂಡರಿ ಬಾರಿಸಲು ಕಾರಣವಾದ, ಮಾಸ್ಟರ್ ಸ್ಟ್ರೋಕ್ ನೀಡಬಲ್ಲ ಬ್ಯಾಟ್ ಮಾಡಿಕೊಡುತ್ತಿದ್ದ ಮಾಂತ್ರಿಕನ ಚೇತರಿಕೆಗೆ ಕ್ರಿಕೆಟಿಗರು ಹಾರೈಸಿದ್ದಾರೆ.
ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಸದಾ ಬ್ಯುಸಿ ಇರುತ್ತಿದ್ದ ಆಶ್ರಫ್ ಚೌಧರಿ, ಲಾಕ್ ಡೌನ್ ನಿಂದಾಗಿ ಬ್ಯಾಟ್ ತಯಾರಿಸುವುದು, ರಿಪೇರಿ ಇತ್ಯಾದಿ ಕೆಲಸಗಳಿಲ್ಲದೆ ಸಂಪಾದನೆ, ಆರೋಗ್ಯ ಎರಡೂ ಕೈಕೊಟ್ಟಿದೆ.
ಮಧುಮೇಹ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು, 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಶ್ರಫ್ ಚಾಚಾ ಆರೋಗ್ಯ ವಿಚಾರಿಸಿರುವ ಸಚಿನ್ ತೆಂಡೂಲ್ಕರ್, ಹಣಕಾಸಿನ ನೆರವೂ ನೀಡಿದ್ದಾರೆ.
ಸಚಿನ್ ಮಾತ್ರವಲ್ಲದೆ, ವಿರಾಟ್ ಕೊಹ್ಲಿ ಸೇರಿ ಟೀಮ್ ಇಂಡಿಯಾದ ಅನೇಕ ಆಟಗಾರರ ಬ್ಯಾಟ್ ತಯಾರಿಸಿಕೊಟ್ಟ ಆಶ್ರಫ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್, ಕೈರೋನ್ ಪೋಲಾರ್ಡ್ ರಂತಹವರಿಗೂ ಬ್ಯಾಟ್ ದುರಸ್ತಿ ಮಾಡಿಕೊಟ್ಟಿದ್ದಾರೆ.