
24 ವರ್ಷದ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನ ಮಾಡಿದ್ದ ತೆಂಡೂಲ್ಕರ್ಗೆ ಒಂದೇ ಒಂದು ಟ್ವೀಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಾ ಅನ್ನೋವಷ್ಟರಲ್ಲಿ ಇದೀಗ ತೆಂಡೂಲ್ಕರ್ಗೆ ಅಭಿಮಾನಿಗಳಿಂದಲೇ ಸಾಥ್ ಸಿಕ್ಕಿದೆ.
ಸಚಿನ್ ವಿರುದ್ಧ ಮಾಡಲಾದ ಎಲ್ಲಾ ಟ್ರೋಲ್ಗಳಿಗೆ ಇದೀಗ ಕ್ರಿಕೆಟ್ ದೇವರ ನಿಜವಾದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಠಕ್ಕರ್ ನೀಡ್ತಿದ್ದಾರೆ. ಸಚಿನ್ ತೆಂಡೂಲ್ಕರ್ರ ಮಿಲಿಯನ್ಗಟ್ಟಲೇ ಫ್ಯಾನ್ಗಳು ಕರಗಿ ಹತ್ತೇ ಅಭಿಮಾನಿಗಳು ಉಳಿದು ಕೊಂಡರೂ ಸಹ ಅದರಲ್ಲೊಬ್ಬ ನಾನಾಗಿರುತ್ತೇನೆ ಎಂದು ಅಭಿಮಾನಿಗಳು ಟ್ವೀಟ್ ಮಾಡ್ತಿದ್ದಾರೆ. IStandWithSachin ಎಂಬ ಹ್ಯಾಶ್ಟ್ಯಾಗ್ನ ಅಡಿಯಲ್ಲಿ ಸಾಕಷ್ಟು ಟ್ವೀಟ್ಗಳು ಹರಿದಾಡುತ್ತಿವೆ.