ಕೊರೋನಾ ವೈರಾಣುವಿನಿಂದಾಗಿ ಎಲ್ಲ ಕ್ರಿಯಾಶೀಲ ಚಟುವಟಿಕೆ ಸ್ಥಗಿತ ಆಗಿದೆ. ಆದರೆ, ಲಾಕ್ಡೌನ್ ನಿಂದಾಗಿ ಹಲವು ರೀತಿಯ ಪ್ರತಿಭೆಗಳು ಹೊರಬರುತ್ತಿದ್ದು, ರಾತ್ರೋರಾತ್ರಿ ಸ್ಟಾರ್ ಆದವರಿದ್ದಾರೆ.
ಆಟಗಾರರು ಮೈದಾನಕ್ಕಿಳಿಯಲಾಗುತ್ತಿಲ್ಲ. ಕ್ರೀಡಾಳುಗಳು ಜಿಮ್, ವರ್ಕೌಟ್ ಕಡೆ ಹೆಚ್ಚು ಒಲವು ತೋರಿದ್ದು, ಜೊತೆಗೆ ಜಾಲತಾಣಗಳ ಮೂಲಕ ಅಭಿಮಾನಿಗಳನ್ನ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಅಲ್ಲಿ ಸವಾಲೊಂದನ್ನ ನೀಡಿದ್ದು, ಅದಕ್ಕೆ ಬಂದ ಕ್ರೇಜಿ ಉತ್ತರಗಳಿಂದ ಥ್ರಿಲ್ ಆಗಿದ್ದಾರೆ.
ಕೊಹ್ಲಿ ವರ್ಕೌಟ್ ಮಾಡುವ ಜಾಗದಲ್ಲಿ ಓಡುವ ವಿಡಿಯೋವೊಂದನ್ನು ಟ್ವಿಟ್ಟರ್ ಅಲ್ಲಿ ಅಪ್ಲೋಡ್ ಮಾಡಿ, ಕ್ಯಾಪ್ಶನ್ ಕೊಡುವಂತೆ ಸವಾಲೊಡ್ಡಿದ್ದರು. ಕೊಹ್ಲಿಯ ಅಭಿಮಾನಿಗಳು ಹಲವು ಕ್ಯಾಪ್ಶನ್ ಕೊಟ್ಟಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿವೆ.