ಕ್ರಿಕೆಟ್ ಮತ್ತು ಸಿನೆಮಾ ತಾರೆಯರ ನಡುವೆ ಲವಿಡವಿ ಸ್ಟೋರಿಗಳು ಕೇಳಿ ಬರುವುದು ಹೊಸ ವಿಷಯವೇನಲ್ಲ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ನಡುವೆ ರಿಲೇಶನ್ಶಿಪ್ ಇದೆ ಎಂಬ ಗುಮಾನಿಗಳು ಹೊಗೆಯಾಡಲು ಆರಂಭಗೊಂಡು ತಿಂಗಳುಗಳು ಕಳೆದಿವೆ. ಇಬ್ಬರ ನಡುವೆ ಇನ್ಸ್ಟಾಗ್ರಾಂನಲ್ಲಿ ನಡೆಯುವ ಸಂಭಾಷಣೆ ಆಗಾಗ ಹೈಲೈಟ್ ಆಗುತ್ತಿರುತ್ತದೆ.
ಭಾರತದ ಭರವಸೆಯ ಬೌಲರ್ ಆರ್. ಅಶ್ವಿನ್ ಮತ್ತೊಂದು ದಾಖಲೆ: ಟೆಸ್ಟ್ ಕ್ರಿಕೆಟ್ ನಲ್ಲಿ 400 ವಿಕೆಟ್ ಗಳ ಸರದಾರ
ಫೆಮಿನಾ ವೃತ್ತಪತ್ರಿಕೆ ಕವರ್ನಲ್ಲಿ ಕಾಣಿಸಿಕೊಂಡ ಅತಿಯಾ ಇತ್ತೀಚೆಗೆ ಪೋಸ್ಟ್ ಮಾಡಿದ್ದ ತಮ್ಮ ಚಿತ್ರವೊಂದಕ್ಕೆ ಕಾಮೆಂಟ್ ಮಾಡಿದ ರಾಹುಲ್, ಬೇಬಿ ಏಂಜೆಲ್ನ ಎಮೋಜಿಯೊಂದನ್ನು ಹಾಕಿದ್ದಾರೆ.
ಆಗಾಗ ಡಿನ್ನರ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಇಬ್ಬರೂ ಸ್ನೇಹಿತರೊಂದಿಗೆ ಹಾಲಿಡೇ ಮಾಡುತ್ತಾ ಇರುತ್ತಾರೆ. ಆದರೆ ತಮ್ಮಿಬ್ಬರ ಸಂಬಂಧದ ಕುರಿತಾಗಿ ಇಬ್ಬರೂ ಏನನ್ನೂ ಹೇಳಿಲ್ಲ.
https://www.instagram.com/p/CLqaTdRHGDx/?utm_source=ig_web_copy_link