ರಾಯಲ್ ಎನ್‌ಫೀಲ್ಡ್ ಇಂಟರ್ಸೆಪ್ಟರ್ 650ಗೆ ಮಾರ್ಪಾಡು ಮಾಡಿರುವ ಬೈಕ್ ಬಿಲ್ಡರ್ ಒಬ್ಬರು ಅದನ್ನು 132.050 ಮೈಲಿ/ಗಂಟೆ (212.514 ಕಿಮೀ/ಗಂಟೆ) ವೇಗದಲ್ಲಿ ಚಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾದ ಲೇಕ್ ಗೈರ್ಡ್ನರ್‌ನಲ್ಲಿ ನಡೆದ ಸ್ಪೀಡ್ ವೀಕ್ ರನ್ ಸ್ಫರ್ಧೆಯಲ್ಲಿ, ಎಂಎಫ್ 650 ಕ್ಲಾಸ್ (650ಸಿಸಿ ಮೋಟರ್‌ಬೈಕ್‌ಗಳು) ಕೆಟಗರಿಯಲ್ಲಿ ದಾಖಲಾದ ಈ ವೇಗ ನಾಲ್ಕು ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ. ಈ ಹಿಂದೆ 119.61 ಮೈಲಿ/ಗಂಟೆಯ ವೇಗವೇ ಈ ಕೆಟಗರಿಯಲ್ಲಿ ದಾಖಲೆಯಾಗಿತ್ತು.
ವಿಧವೆಗೆ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ, ಅಸ್ವಾಭಾವಿಕ ಸೆಕ್ಸ್ ಗೆ ಮಾವನ ಒತ್ತಡ
’ಸ್ಯಾಬ್ರೆ’ ಎಂದು ಕರೆಯಲ್ಪಡುವ ರಾಯಲ್ ಎನ್‌ಫೀಲ್ಡ್ ಇಂಟರ್ಸೆಪ್ಟರ್ 650ಯನ್ನು ಎಚ್‌ಆರ್‌ಎ ಗೀಲಾಂಗ್ ಹಾಗೂ ಹಲ್ಲಮ್ ಸೈಕಲ್ ವರ್ಕ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಮೊದಲ ಬಾರಿಗೆ ಸಾಲ್ಟ್ ರೇಸ್‌ನಲ್ಲಿ ಭಾಗಿಯಾಗಿರುವ ಚಾರ್ಲಿ ಹಲ್ಲಮ್ ಅವರು ಈ ಇಂಟರ್ಸೆಪ್ಟರ್ ಬೈಕ್ ಓಡಿಸಿ ಈ ದಾಖಲೆ ನಿರ್ಮಿಸಿದ್ದಾರೆ.
https://www.instagram.com/p/CMdWx8GhLf6/?utm_source=ig_web_copy_link