ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 67 ರನ್ ಭರ್ಜರಿ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ವಿರಾಟ್ ಕೊಹ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟಾಗಿದ್ದಾರೆ. ಫಾಫ್ ಡುಪ್ಲೆಸಿಸ್ ಅಜೇಯ 73, ರಜತ್ ಪಾಟಿದಾರ್ 48, ಗ್ಲೆನ್ ಮ್ಯಾಕ್ಸ್ ವೆಲ್ 33, ದಿನೇಶ್ ಕಾರ್ತಿಕ್ ಅಜೇಯ 30 ರನ್ ಗಳಿಸಿದರು. ಸನ್ ರೈಸರ್ಸ್ ಪರವಾಗಿ ಜಗದೀಶ ಸುಚಿತ್ 2, ಕಾರ್ತಿಕ್ ತ್ಯಾಗಿ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಶರ್ಮ 0, ಕೇನ್ ವಿಲಿಯಂಸನ್ 0, ರಾಹುಲ್ ತ್ರಿಪಾಟಿ 58, ಏಡನ್ ಮಕ್ರಂ 21, ನಿಕೋಲಸ್ ಪೂರನ್ 19, ಜಗದೀಶ್ ಸುಚಿತ್ 2, ಶಶಾಂಕ್ ಸಿಂಗ್ 8, ಕಾರ್ತಿಕ್ ತ್ಯಾಗಿ 0, ಭುವನೇಶ್ವರ್ ಕುಮಾರ್ 8, ಉಮ್ರಾನ್ ಮಲಿಕ್ 0, ಎಫ್. ಫಾರೂಕಿ ಅಜೇಯ 2 ರನ್ ಗಳಿಸಿದರು. ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ 19.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು.
ಆರ್.ಸಿ.ಬಿ. ಪರವಾಗಿ ಗ್ಲೆನ್ ಮ್ಯಾಕ್ಸ್ವೆಲ್ 1, ವಾನಿಂದು ಹಸರಂಗ 5, ಜೋಸ್ ಏಜಲ್ ವುಡ್ 2, ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.
ಏಪ್ರಿಲ್ 23 ರಂದು ನಡೆದ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಆರ್.ಎಸ್.ಬಿ. ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೇಡುತೀರಿಸಿಕೊಂಡಿದೆ. ಗೋಗ್ರೀನ್ ಸ್ವಚ್ಛ ಹಾಗೂ ಸುಂದರ ಪರಿಸರದ ಗುರಿಯೊಂದಿಗೆ ಆರ್.ಸಿ.ಬಿ. ಆಟಗಾರರು ಹಸಿರು ಬಣ್ಣದ ಜರ್ಸಿ ಧರಿಸಿ ಆಡಿದರು.