
ಐಪಿಎಲ್ ಸೀಸನ್ ಆರಂಭಗೊಂಡರೆ ದೇಶದಲ್ಲಿ ಕ್ರಿಕೆಟ್ ಹುಚ್ಚು ಎಂದಿಗಿಂತ ಒಂದು ಕೈ ಹೆಚ್ಚೇ ಆಗಿಬಿಡುತ್ತದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಬಹಳ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. 2021ರ ಐಪಿಎಲ್‌ನ ತಮ್ಮ ತಂಡದ ಮೊದಲ ಪಂದ್ಯದಲ್ಲಿ ರೋಹಿತ್ ಬ್ಯಾಟಿಂಗ್ ವೇಳೆ ಒಳ್ಳೆಯ ಆರಂಭವನ್ನೇ ಪಡೆದುಕೊಂಡಿದ್ದರು. ನಿರೀಕ್ಷೆಯಂತೆಯೇ ಮುಂಬೈ ತಂಡದ ಅಭಿಮಾನಿಗಳು ಆ ತಂಡಕ್ಕೆ ಎಲ್ಲೆಡೆಯಿಂದ ಚಿಯರ್ ಮಾಡಿದ್ದರು.
ಮೊದಲ ಪಂದ್ಯದಲ್ಲೇ ಮುಗ್ಗರಿಸಿ ಬಿದ್ದ CSK ನಾಯಕ ಧೋನಿಗೆ ಮತ್ತೊಂದು ಶಾಕ್
ಇದರ ನಡುವೆ ರೋಹಿತ್ ಅಭಿಮಾನಿಯೊಬ್ಬ ಎಲ್ಲರಿಗಿಂತ ಒಂದು ಕೈ ಮುಂದೆ ಹೋಗಿದ್ದಾನೆ. ಶುಕ್ರವಾರದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ರೋಹಿತ್ ಶರ್ಮಾ ತಮ್ಮ ಆರಂಭಿಕ ಜೋಡಿಯೊಂದಿಗೆ ಕ್ರೀಸ್‌ಗೆ ಬರುತ್ತಲೇ ಅವರಿಗೆ ಟಿವಿ ಪರದೆ ಮೇಲಿಂದಲೇ ಈ ಅಭಿಮಾನಿ ಆರತಿ ಮಾಡಿದ್ದಾನೆ. ಈ ಆರತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಇದೇ ವಿಡಿಯೋವನ್ನು ಇನ್ನಷ್ಟು ವ್ಯಾಪಕವಾಗಿ ಶೇರ್ ಮಾಡಿದ್ದಾರೆ.
https://twitter.com/ItzTNR_/status/1380552275509223425?ref_src=twsrc%5Etfw%7Ctwcamp%5Etweetembed%7Ctwterm%5E1380552275509223425%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Frohit-sharma-fan-aarti-mumbai-indians-royal-challengers-bangalore-ipl-2021-viral-video-twitter-3626054.html