ಓಪನರ್ ರೋಹಿತ್ ಶರ್ಮಾ ಮುಂದಿನ ಎಂ.ಎಸ್. ಧೋನಿ ಎಂದು ಭಾರತದ ಹಿರಿಯ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ. ಇಬ್ಬರ ಮಧ್ಯೆ ಇರುವ ಸಾಮ್ಯತೆಯ ಆಧಾರದ ಮೇಲೆ ಸುರೇಶ್ ರೈನಾ ಇದನ್ನು ಹೇಳಿದ್ದಾರೆ. ರೋಹಿತ್ ಅವರ ನಾಯಕತ್ವದ ಸಾಮರ್ಥ್ಯವನ್ನು ರೈನಾ ಶ್ಲಾಘಿಸಿದ್ದಾರೆ.
ರೋಹಿತ್ ನಾಯಕನಾಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಮುಂಬೈ ಇಂಡಿಯನ್ಸ್, ನಾಲ್ಕು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಎತ್ತಿ ಹಿಡಿದಿದೆ. ಶರ್ಮಾ ನಾಯಕತ್ವದಲ್ಲಿ ಮುಂಬೈ ಅತ್ಯಂತ ಯಶಸ್ವಿ ತಂಡವಾಗಿದೆ.
ರೋಹಿತ್, ಭಾರತೀಯ ಕ್ರಿಕೆಟ್ ತಂಡದ ಮುಂದಿನ ಎಂಎಸ್ ಧೋನಿ ಎಂದು ನಾನು ಹೇಳುತ್ತೇನೆ. ನಾನು ಅವರನ್ನು ನೋಡಿದ್ದೇನೆ. ಅವರು ಶಾಂತನಾಗಿರುತ್ತಾರೆ. ಅವರು ಬೇರೆ ಆಟಗಾರರು ಹೇಳಿದ್ದನ್ನು ಕೇಳ್ತಾರೆ. ಆಟಗಾರರಿಗೆ ಆತ್ಮವಿಶ್ವಾಸವನ್ನು ತುಂಬುತ್ತಾರೆ. ಆಟಗಾರರನ್ನು ಮುನ್ನಡೆಸಲು ಇಷ್ಟಪಡ್ತಾರೆಂದು ರೈನಾ ಹೇಳಿದ್ದಾರೆ.