alex Certify ಟ್ರೋಲಿಗರಿಗೆ ಆಹಾರವಾಯ್ತು ʼಟೀಂ ಇಂಡಿಯಾʼ ಆಟಗಾರನ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೋಲಿಗರಿಗೆ ಆಹಾರವಾಯ್ತು ʼಟೀಂ ಇಂಡಿಯಾʼ ಆಟಗಾರನ ಫೋಟೋ…!

ಟೀಂ ಇಂಡಿಯಾ ಸ್ಟಾರ್​ ಕ್ರಿಕೆಟಿಗ ರೋಹಿತ್​ ಶರ್ಮಾ ಭಾನುವಾರ ಪಿಚ್​ ಮೇಲೆ ಮಲಗಿಕೊಂಡಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಆದರೆ ಫೋಟೋ ಶೇರ್ ಮಾಡೋದ್ರ ಜೊತೆ ಜೊತೆಗೆ ಮೊಟೆರಾ ಸ್ಟೇಡಿಯಂನ ಪಿಚ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವವರ ಕಾಲೆಳೆದಿದ್ದರು.

ವಿಶ್ವದ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೆರಾ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್​ ಪಂದ್ಯದದಲ್ಲಿ 10 ವಿಕೆಟ್​ ಅಂತರದ ಗೆಲುವನ್ನ ಸಾಧಿಸಿತ್ತು. ಈ ಫಲಿತಾಂಶದ ಬಳಿಕ ಪಿಚ್​ ಬಗ್ಗೆ ಇಂಗ್ಲೆಂಡ್​ ತಂಡದ ಮಾಜಿ ನಾಯಕ ಸೇರಿದಂತೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಸಂಬಂಧ ಇದೀಗ ಇನ್​ಸ್ಟಾಗ್ರಾಂನಲ್ಲಿ ಟಾಂಗ್​ ನೀಡಿರುವ ರೋಹಿತ್​ ಶರ್ಮಾ, ನಾಲ್ಕನೇ ಟೆಸ್ಟ್​ ವೇಳೆಗೆ ಪಿಚ್​ ಯಾವ ರೀತಿ ಇರಬಹುದು ಎಂದು ಯೋಚನೆ ಮಾಡುತ್ತಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ಪಿಚ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ.

ಆದರೆ ರೋಹಿತ್​ ಶರ್ಮಾರ ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಬಾಡೂಟವಾಗಿದೆ. ರೋಹಿತ್​ರ ಇದೇ ಫೋಟೋವನ್ನ ಬಳಸಿ ಮೀಮ್ಸ್ ಸುರಿಮಳೆಯನ್ನೇ ಹರಿಸಲಾಗ್ತಿದೆ.

https://www.instagram.com/p/CL1iahkBR6M/?utm_source=ig_web_copy_link

— Pakchikpak Raja Babu (@HaramiParindey) March 1, 2021

https://twitter.com/NeecheSeTopper/status/1366067265167269890

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...