
ಏಕದಿನ ಕ್ರಿಕೆಟ್ ನಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿ ದಾಖಲೆ ಮಾಡಿರುವ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ನ್ಯೂಜಿಲ್ಯಾಂಡ್ ನ ವೇಗದ ಬೌಲರ್ ಲಾಕೀ ಫರ್ಗ್ಯೂಸನ್ ಹೊಗಳಿದ್ದಾರೆ.
ಲಾಕಿ ಫರ್ಗ್ಯುಸನ್ ಅವರಿಗೆ ಸಂದರ್ಶನವೊಂದರಲ್ಲಿ ನಿಮಗೆ ಬೌಲಿಂಗ್ ಮಾಡಲು ಯಾವ ಬ್ಯಾಟ್ಸ್ ಮನ್ ಸವಾಲೆನಿಸುತ್ತಾರೆ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡುವುದು ಕಷ್ಟವೆನಿಸುತ್ತದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮ ಅವರನ್ನು ಔಟ್ ಮಾಡದೆ ಬಿಟ್ಟರೆ ದೊಡ್ಡ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ನಾನು ಅವರ ಅಭಿಮಾನಿ ಎಂದೂ ಫರ್ಗ್ಯೂಸನ್ ಹೇಳಿದ್ದಾರೆ.