
ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಸಿಂಗ್ ಅವರು ಲಾಕ್ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಚೆನ್ನೈ ಪೊಲೀಸರು ದಂಡ ವಿದಿಸಿದ್ದಾರೆ.
ಲಾಕ್ ಡೌನ್ ನಿಯಮ ಉಲ್ಲಂಘಿಸಿದ ರಾಬಿನ್ ಸಿಂಗ್ ಅವರ ಕಾರ್ ಅನ್ನು ವಶಕ್ಕೆ ಪಡೆದಿದ್ದು ನಿಯಮ ಮೀರಿದ ಕಾರಣ 500 ರೂಪಾಯಿ ದಂಡ ಹಾಕಲಾಗಿದೆ. ಚೆನ್ನೈ ಮಹಾನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಲಾಕ್ಡೌನ್ ಕಠಿಣ ನಿರ್ಬಂಧ ಜಾರಿಯಲ್ಲಿದೆ.
ರಾಬಿನ್ ಸಿಂಗ್ ತರಕಾರಿ ತರಲು ಮಾರುಕಟ್ಟೆಗೆ ಹೋಗಿ ನಿಯಮ ಉಲ್ಲಂಘಿಸಿದ್ದು ಶಾಸ್ತ್ರಿನಗರ ಠಾಣೆ ಪೊಲೀಸರು ನಿಯಮ ಉಲ್ಲಂಘಿಸಿದ ಕಾರ್ ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.