ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ನ ಫೈನಲ್ ಮ್ಯಾಚ್ನಲ್ಲಿ ಇಂಡಿಯಾ ಲೆಜೆಂಡ್ಸ್ ಶ್ರೀಲಂಕಾ ಲೆಜೆಂಡ್ಸ್ನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಯುಸೂಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ಅದ್ಭುತ ಪ್ರದರ್ಶನ ನೀಡಿದ್ರು.
ಇದೇ ಪಂದ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಯುವರಾಜ್ ಸಿಂಗ್ರ ಬ್ಯಾಟಿಂಗ್ ಪ್ರದರ್ಶನವನ್ನ ನೋಡುತ್ತಿದ್ದ ಪುಟ್ಟ ಬಾಲಕಿ ಸ್ಟೇಡಿಯಂನಲ್ಲಿ ಯುವಿ ಯುವಿ ಎಂದು ಹೇಳಿ ಸಂಭ್ರಮಿಸಿದ್ದಾಳೆ. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಅಂದರೆ ಸ್ವತಃ ಯುವರಾಜ್ ಸಿಂಗ್ ಈ ಬಾಲಕಿಯ ಫ್ಯಾನ್ ಆಗಿದ್ದಾರೆ.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಯುವರಾಜ್ ಸಿಂಗ್ ಅಂದಹಾಗೆ ಈ ಮುದ್ದಾದ ಮಗು ಯಾರು..? ಮಗಳೇ ಸುರಕ್ಷಿತವಾಗಿರು ಹಾಗೂ ಎಲ್ಲಾ ಸಮಯದಲ್ಲೂ ಫೇಸ್ ಮಾಸ್ಕ್ ಧರಿಸು ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.