
ಆಸ್ಟ್ರೇಲಿಯಾದ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವಿಗೆ ಕಾರಣರಾದ ರಿಶಭ್ ಪಂತ್ ಇವತ್ತಿನ ಹೀರೋ ಆಗಿದ್ದಾರೆ. 23 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ನ ಅದ್ಧೂರಿ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-1ರಲ್ಲಿ ಗೆದ್ದಿದೆ.
ಬ್ರಿಸ್ಬೇನ್‌ನ ಗಾಬ್ಬಾದಲ್ಲಿ ಕಳೆದ 32 ವರ್ಷಗಳಿಂದ ಅಜೇಯ ದಾಖಲೆ ಕಾಪಾಡಿಕೊಂಡು ಬಂದಿದ್ದ ಆಸೀಸ್‌ಅನ್ನು ಮಣಿಸುವ ಮೂಲಕ ಅಜಿಂಕ್ಯಾ ರಹಾನೆ ನೇತೃತ್ವದ ತಂಡವು ಅಸಾಧಾರಣ ಗೆಲುವು ಸಾಧಿಸಿದೆ.
ಗೆಲುವಿನ ಬೌಂಡರಿ ಗಳಿಸುತ್ತಲೇ ರಿಶಭ್ ಪಂತ್‌ರನ್ನು ಸುತ್ತುವರೆದ ಟೀಂ ಇಂಡಿಯಾ ತಂಡದ ಇತರ ಆಟಗಾರರು, ಅವರನ್ನು ಅಪ್ಪಿ ಅಭಿನಂದಿಸಿದ್ದಾರೆ. ಇದೇ ವೇಳೆ ಕೋಚ್ ರವಿ ಶಾಸ್ತ್ರಿ ಸಹ ಪಂತ್‌ಗೆ ಅಪ್ಪುಗೆಯ ಅಭಿನಂದನೆ ತಿಳಿಸಿದ್ದಾರೆ. ಇಬ್ಬರ ಈ ಆಲಿಂಗನದ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಸಖತ್ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.
https://twitter.com/Naniricci45/status/1351434493043720193?ref_src=twsrc%5Etfw%7Ctwcamp%5Etweetembed%7Ctwterm%5E1351434493043720193%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Frishabh-pant-receiving-a-warm-hug-from-ravi-shastri-after-gabba-heroics-makes-fans-emotional-3311192.html