ದುಬೈ: ಕೊನೆಯ ಬಾಲ್ ನಲ್ಲಿ ಶ್ರೀಕರ್ ಭರತ್ ಸಿಡಿಸಿದ ಅಮೋಘ ಸಿಕ್ಸರ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ ಗಳ ಭಾರಿ ಅಂತರದಿಂದ ಜಯಗಳಿಸಿದ್ದು ಪ್ರೇಆಫ್ ಪ್ರವೇಶಿಸಿದೆ.
18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಅಕ್ಟೋಬರ್ 11 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ತಂಡವನ್ನು ಎದುರಿಸಲಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಪೃಥ್ವಿ ಶಾ 40, ಧವನ್ 43, ಹೆಟ್ಮೈಯರ್ 29 ರನ್ ಗಳಿಸಿದರು. ಆರ್ಸಿಬಿ ಪರವಾಗಿ ಮಹಮ್ಮದ್ ಸಿರಾಜ್ 2, ಯಜುವೇಂದ್ರ ಚಹಾಲ್, ಹರ್ಷಲ್ ಪಟೇಲ್, ಡ್ಯಾನ್ ಕ್ರಿಶ್ಚಿಯನ್ ತಲಾ 1 ವಿಕೆಟ್ ಪಡೆದರು.
165 ರನ್ ಗೆಲುವಿನ ಗುರಿ ಬೆನ್ನತ್ತಿದ ಆರ್ಸಿಬಿ 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 4. ಶ್ರೀಕರ್ ಭರತ್ ಅಜೇಯ 78, ಎಬಿ ಡಿ ವಿಲಿಯರ್ಸ್ 26, ಗ್ಲೆನ್ ಮ್ಯಾಕ್ಸ್ ವೆಲ್ ಅಜೇಯ 51 ರನ್ ಗಳಿಸಿದರು.
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಕರ ಭರತ್ 52 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಒಳಗೊಂಡ ಅಜೇಯ 78 ರನ್ ಗಳಿಸಿದರು. ಕೊನೆ ಎಸೆತದಲ್ಲಿ ಅವರು ಸಿಡಿಸಿದ ಅಮೋಘ ಸಿಕ್ಸರ್ ನೆರವಿನಿಂದ ಆರ್ಸಿಬಿ ಕೊನೆಯ ಎಸೆತದವರೆಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ರೋಚಕ ಹಣಾಹಣಿಯಲ್ಲಿ ಆರ್ಸಿಬಿ ಭರ್ಜರಿ ಜಯಗಳಿಸಿದೆ.