ಕೊರೊನಾ ಸಾಂಕ್ರಾಮಿಕದಿಂದ ಐದು ತಿಂಗಳ ವಿರಾಮದ ನಂತ್ರವೂ ಫಿಟ್ನೆಸ್ ಕಾಯ್ದುಕೊಂಡಿರುವ ಆರ್ ಸಿ ಬಿ ಆಟಗಾರರ ಬಗ್ಗೆ ನಾಯಕ ಕೊಹ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಶುರುವಾಗಲಿದ್ದು, ಎಲ್ಲ ಆಟಗಾರರು ಫಿಟ್ ಆಗಿದ್ದಾರೆಂದು ಕೊಹ್ಲಿ ಹೇಳಿದ್ದಾರೆ.
ಯುಎಇ ತಲುಪಿದ ನಂತ್ರ ಅಭ್ಯಾಸ ನಡೆಸಿದ್ದು, ಇದ್ರಿಂದ ಉತ್ತಮ ಅನುಭವವಾಯ್ತು ಎಂದು ಕೊಹ್ಲಿ ಹೇಳಿದ್ದಾರೆ. ಆರ್ ಸಿ ಬಿ ಟ್ವಿಟರ್ ನಲ್ಲಿ ಕೊಹ್ಲಿ ಈ ವಿಷ್ಯ ತಿಳಿಸಿದ್ದಾರೆ. ಪ್ರತಿಯೊಬ್ಬ ಆಟಗಾರರು ಫಿಟ್ ಆಗಿದ್ದಾರೆ. ಇದು ಒಳ್ಳೆಯ ವಿಷ್ಯ. ನನಗೆ ಮೊದಲ ಅಭ್ಯಾಸ ಖುಷಿ ನೀಡಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಯಾವುದೇ ಆಟಗಾರನಿಗೆ ಗಾಯವಾಗದಂತೆ ತಂಡದ ಆಡಳಿತವು ಎರಡು ವಾರಗಳ ಕಾಲ ತರಬೇತಿಯಲ್ಲಿ ಸಂಪೂರ್ಣ ಸಮತೋಲನವನ್ನು ಕಾಯ್ದುಕೊಂಡಿದೆ ಎಂದು ಭಾರತೀಯ ನಾಯಕ ಹೇಳಿದ್ದಾರೆ. ದೀರ್ಘ ವಿರಾಮದಿಂದಾಗಿ ಅಭ್ಯಾಸದ ವೇಳೆ ಕೆಲವು ಸಮಸ್ಯೆಯಾಯ್ತು. ಆದ್ರೆ ಆಟಗಾರರು ಮತ್ತೆ ಲಯಕ್ಕೆ ಬಂದಿದ್ದಾರೆಂದು ಕೊಹ್ಲಿ ಹೇಳಿದ್ದಾರೆ. ಆರ್ ಸಿ ಬಿ ಸೆಪ್ಟೆಂಬರ್ 21ರಂದು ಹೈದ್ರಾಬಾದ್ ಜೊತೆ ಮೊದಲ ಪಂದ್ಯವಾಡಲಿದೆ.