
ನಿಶ್ಚಿತಾರ್ಥ ಫೋಟೋಗಳನ್ನ ತೆವಾಟಿಯಾ ಸೇರಿದಂತೆ ಇನ್ನಿಬ್ಬರು ಆಟಗಾರರಾದ ಜಯಂತ್ ಯಾದವ್ ಹಾಗೂ ನಿತೀಶ್ ರಾಣಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ತೇವಾಟಿಯಾಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ರಾಹುಲ್ ತೇವಾಟಿಯಾ ತಮ್ಮ ಅದ್ಭುತ ಪ್ರದರ್ಶನದ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಹೀರೋ ಎನಿಸಿಕೊಂಡಿದ್ದಾರೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬೌಲರ್ ಶೆಲ್ಡೋನ್ ಕೊಟ್ರೆಲ್ರ ಒಂದು ಓವರ್ಗೆ 5 ಸಿಕ್ಸ್ ಬಾರಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು.
ಸ್ಟಾರ್ ಬೌಲರ್ಗಳ ವಿರುದ್ಧ ಅದ್ಭುತ ಪ್ರದರ್ಶನ ತೋರಿದ್ದ ತೇವಾಟಿಯಾಗೆ ಕೊಹ್ಲಿ ತಮ್ಮ ಆಟೋಗ್ರಾಫ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿಯನ್ನ ಉಡುಗೊರೆಯಾಗಿ ನೀಡಿದ್ದರು.
