
ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಜಯಭೇರಿ ಬಾರಿಸಿದೆ.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿದ್ದಾರೆ. 64 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ ಸಹಿತ 124 ರನ್ ಗಳಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 3 ವಿಕೆಟ್ ಗೆ 220 ರನ್ ಗಳಿಸಿದೆ. ಜೋಸ್ ಬಟ್ಲರ್ 124, ಯಶಸ್ವಿ ಜೈಸ್ವಾಲ್ 12, ಸಂಜು ಸ್ಯಾಮ್ಸನ್ 48 ರಿಯಾನ್ ಪರಾಗ್ ಅಜೇಯ 15, ಡೇವಿಡ್ ಮಿಲ್ಲರ್ ಅಜೇಯ 7 ರನ್ ಗಳಿಸಿದ್ದಾರೆ.
ಗೆಲುವಿನ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಪರಾಭವಗೊಂಡಿದೆ. ಮನೀಶ್ ಪಾಂಡೆ 31, ಜಾನಿ ಬೈರ್ ಸ್ಟೋವ್ 30, ವಿಲಿಯಮ್ಸನ್ 20 ರನ್ ಗಳಿಸಿದ್ದಾರೆ. ರಾಜಸ್ಥಾನ ಪರವಾಗಿ ಮುಸ್ತಾಫಿಜರ್ ರೆಹಮಾನ್ 3, ಕ್ರಿಸ್ ಮೋರಿಸ್ 3 ವಿಕೆಟ್ ಪಡೆದು ಗಮನಸೆಳೆದರು.