
ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಲಿದ್ದಾರೆ. ಟಿ20 ವಿಶ್ವಕಪ್ ಮುಗಿದ ನಂತರ NCA ಹುದ್ದೆ ತೊರೆದು ಕೋಚ್ ಆಗಲು ಅವರು ಒಪ್ಪಿಗೆ ನೀಡಿದ್ದಾರೆ.
ಪೂರ್ಣಾವಧಿ ಕೋಚ್ ಆಗಲು ದ್ರಾವಿಡ್ ಒಪ್ಪಿಗೆ ನೀಡಿದ್ದು, ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ರವಿಶಾಸ್ತ್ರಿ ಅವರು ಮುಕ್ತಾಯವಾಗಲಿದೆ. ನಂತರ ರಾಹುಲ್ ದ್ರಾವಿಡ್ ಕೋಚ್ ಹುದ್ದೆ ಸ್ವೀಕರಿಸಲಿದ್ದಾರೆ.
ಈ ಕುರಿತಾಗಿ ಬಿಸಿಸಿಐನಿಂದ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲವಾದರೂ ರಾಹುಲ್ ದ್ರಾವಿಡ್ ಎರಡು ವರ್ಷಗಳ ಅವಧಿಗೆ ಮುಖ್ಯ ಕೋಚ್ ಆಗಲಿದ್ದಾರೆ ಎಂದು ಹೇಳಲಾಗಿದೆ.