ಪ್ಯಾರಿಸ್: ರೋಲ್ಯಾಂಡ್ ಗ್ಯಾರೋಸ್ ನ ಫಿಲಿಪ್ ಚಾಟ್ರಿಯರ್ ಕೋರ್ಟ್ ನಲ್ಲಿ ಭಾನುವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅನುಭವಿ ಆಟಗಾರ ರಾಫೆಲ್ ನಡಾಲ್ ಭರ್ಜರಿ ಜಯ ಗಳಿಸಿದ್ದಾರೆ.
ನಾರ್ವೆಯ ಕಾಸ್ಟರ್ ರೂಡ್ ಅವರ ವಿರುದ್ಧ 6 -3, 6 -3, 6 -0 ನೇರ ಸೆಟ್ ಗಳ ಮೂಲಕ ಜಯ ಸಾಧಿಸಿದ್ದಾರೆ. ಇದರೊಂದಿಗೆ ಫ್ರೆಂಚ್ ಓಪನ್ ನಲ್ಲಿ 14 ಬಾರಿ ಅವರು ಚಾಂಪಿಯನ್ ಆಗಿದ್ದಾರೆ. 22ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
2009, 2022 ರಲ್ಲಿ ಆಸ್ಟ್ರೇಲಿಯಾ ಓಪನ್, 2005, 2006, 2007, 2008, 2010, 2011, 2012, 2013, 2014, 2017, 2018, 2019, 2020, 2022 ರಲ್ಲಿ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡಿದ್ದಾರೆ. 2008 ಹಾಗೂ 2010ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗಳಿಸಿದ್ದರು. 2010, 2013, 2017 ಹಾಗೂ 2019ರಲ್ಲಿ ಯುಎಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ದಾಖಲೆಯ 22ನೇ ಗ್ರಾನ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡ ಅವರು ಫ್ರೆಂಚ್ ಓಪನ್ ನಲ್ಲಿ 14ನೇ ಪ್ರಶಸ್ತಿ ಗಳಿಸಿದ್ದಾರೆ. ಚಾಂಪಿಯನ್ ರಾಫೆಲ್ ನಡೆದವರಿಗೆ 18.28 ಕೋಟಿ ರೂ. ಬಹುಮಾನ ನೀಡಲಾಗಿದೆ.