alex Certify ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಪಘಾತ: ರೇಸರ್ ಕೆ.ಇ. ಕುಮಾರ್ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಪಘಾತ: ರೇಸರ್ ಕೆ.ಇ. ಕುಮಾರ್ ಸಾವು

ಚೆನ್ನೈ: ಇಲ್ಲಿನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಗೌರವಾನ್ವಿತ ರೇಸರ್ ಕೆ.ಇ. ಕುಮಾರ್ ಭಾನುವಾರ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಸೆಲೂನ್ ಕಾರ್ ರೇಸ್ ವೇಳೆ ಕುಮಾರ್ ಅವರ ಕಾರ್ ಸ್ಪರ್ಧಿಯ ಸಂಪರ್ಕಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ. ಬೇಲಿಗೆ ಡಿಕ್ಕಿ ಹೊಡೆದ ನಂತರ ಕಾರ್ ಟ್ರ್ಯಾಕ್‌ ಗೆ ಅಡ್ಡಲಾಗಿ ಜಾರಿ ಛಾವಣಿಯ ಮೇಲೆ ಬಿದ್ದಿದೆ.

ಕೆಂಪು ಧ್ವಜ ತೋರಿಸಿ ತಕ್ಷಣವೇ ರೇಸ್ ನಿಲ್ಲಿಸಲಾಯಿತು ಕೆಲವೇ ನಿಮಿಷಗಳಲ್ಲಿ ಕುಮಾರ್‌ ನನ್ನು ಅವಶೇಷಗಳಿಂದ ಹೊರತೆಗೆಯಲಾಯಿತು. ಟ್ರ್ಯಾಕ್‌ನ ವೈದ್ಯಕೀಯ ಕೇಂದ್ರದಲ್ಲಿ ಪ್ರಾಥಮಿಕ ಪರೀಕ್ಷೆಯ ನಂತರ ಆಂಬ್ಯುಲೆನ್ಸ್‌ ನಲ್ಲಿ ಹತ್ತಿರದ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆಸ್ಪತ್ರೆಯ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಸಾವನ್ನಪ್ಪಿದ್ದಾರೆ.

ಅಧ್ಯಕ್ಷ ವಿಕ್ಕಿ ಚಾಂಧೋಕ್, ಇದು ಅತ್ಯಂತ ದುರದೃಷ್ಟಕರ ಘಟನೆಯಾಗಿದೆ. ಕುಮಾರ್ ಒಬ್ಬ ಅನುಭವಿ ರೇಸರ್ ಆಗಿದ್ದರು. ನಾನು ಅವರನ್ನು ಹಲವಾರು ದಶಕಗಳಿಂದ ಸ್ನೇಹಿತ ಮತ್ತು ಪ್ರತಿಸ್ಪರ್ಧಿಯಾಗಿ ತಿಳಿದಿದ್ದೇನೆ. MMSC ಮತ್ತು ಇಡೀ ರೇಸಿಂಗ್ ಭ್ರಾತೃತ್ವವು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ. ಅವರ ಕುಟುಂಬಕ್ಕೆ ಸಂತಾಪವನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ.

ಕ್ರೀಡೆಯ ರಾಷ್ಟ್ರೀಯ ಆಡಳಿತ ಮಂಡಳಿ, ಎಫ್‌ಎಂಎಸ್‌ಸಿಐ ಮತ್ತು ಸಂಘಟಕರಾದ ಎಂಎಂಎಸ್‌ಸಿ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ಚಾಂಧೋಕ್ ತಿಳಿಸಿದ್ದು, MMSC ಯ ಆಜೀವ ಸದಸ್ಯರಾಗಿದ್ದ ಕುಮಾರ್ ಅವರಿಗೆ ಗೌರವ ಸೂಚಕವಾಗಿ, ದಿನದ ವೇಳಾಪಟ್ಟಿಯ ಉಳಿದ ಭಾಗವನ್ನು ರದ್ದುಗೊಳಿಸಲಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...