ಬಾಸೆಲ್(ಸ್ವಿಟ್ಜರ್ಲೆಂಡ್): ಭಾರತದ ಖ್ಯಾತ ಷಟ್ಲರ್ ಪಿ.ವಿ. ಸಿಂಧು ಭಾನುವಾರ ಇಲ್ಲಿ ಬಾಸೆಲ್ ನ ಸೇಂಟ್ ಜಾಕೋಬ್ ಶಲ್ಲೆ ಅರೇನಾದಲ್ಲಿ ಸ್ವಿಸ್ ಓಪನ್ 2022 ರ ಮಹಿಳಾ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದು ಸಿಂಧುಗೆ ವರ್ಷದ ಎರಡನೇ ಸೂಪರ್ 300 ಪ್ರಶಸ್ತಿಯಾಗಿದೆ. ಅವರು ಜನವರಿಯಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್ ಅನ್ನು ಗೆದ್ದಿದ್ದಾರೆ.
ಬಾಸೆಲ್ನ ಸೇಂಟ್ ಜಾಕೋಬ್ಶಲ್ಲೆ ಅಖಾಡದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ವಿಶ್ವದ ನಂ.7 ಪಿವಿ ಸಿಂಧು ಅವರು ನಾಲ್ಕನೇ ಶ್ರೇಯಾಂಕದ ಬುಸಾನಾನ್ ಒಂಗ್ಬಮ್ರುಂಗ್ಫಾನ್ ಅವರನ್ನು 21-16, 21-8 ಸೆಟ್ಗಳಿಂದ ಸೋಲಿಸಿ ಸ್ವಿಸ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಕೋರ್ಟ್ 1 ರಲ್ಲಿ ಹೋರಾಡಿದ ಡಬಲ್ ಒಲಿಂಪಿಕ್ ಪದಕ ವಿಜೇತ ಭಾರತೀಯ ಆಟಗಾರ್ತಿ ಥಾಯ್ಲೆಂಡ್ ನ ಬುಸಾನನ್ ಒಂಗ್ ಬಮ್ರುಂಗ್ ಫಾನ್ ಅವರನ್ನು 49 ನಿಮಿಷಗಳಲ್ಲಿ 21-16, 21-8 ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಸಿಂಧು ಈಗ ಥಾಯ್ ಆಟಗಾರ್ತಿ ವಿರುದ್ಧ 16-1 ಅಂತರದ ಹೆಡ್ ಟು ಹೆಡ್ ದಾಖಲೆ ಹೊಂದಿದ್ದಾರೆ.