ನವದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ಕ್ರಿಕೆಟರ್ ವಿರಾಟ್ ಕೊಹ್ಲಿ ಮುಂಬೈ ಬಳಿಯ ಪ್ಲಶ್ ಅಲಿಬಾಗ್ ಪ್ರದೇಶದಲ್ಲಿ 8 ಎಕರೆ ತೋಟದ ಮಾಲೀಕರಾಗಿದ್ದಾರೆ.
ಫಾರ್ಮ್ ಹೌಸ್ ಅಲಿಬಾಗ್ನ ಜಿರಾದ್ ಎಂಬ ಹಳ್ಳಿಯಲ್ಲಿದ್ದು, 8 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ದಂಪತಿಗಳು ಆಸ್ತಿ ಖರೀದಿಗೆ ಸುಮಾರು 19.24 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರದ ಖಜಾನೆಗೆ 1.15 ಕೋಟಿ ರೂಪಾಯಿ ಠೇವಣಿಯಾಗಿ ಪಾವತಿಸಿದ್ದಾರೆ ಎಂದು ಹೇಳಲಾಗಿದೆ.
ವಿರಾಟ್ ಸಹೋದರ ವಿಕಾಸ್ ಕೊಹ್ಲಿ ಗಣೇಶ ಚತುರ್ಥಿಯ ಒಂದು ದಿನ ಮುಂಚಿತವಾಗಿ ವಹಿವಾಟು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಕೊಹ್ಲಿ ಈಗ ದುಬೈನಲ್ಲಿದ್ದು, ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ. ಸಮೀರಾ ಹ್ಯಾಬಿಟ್ಯಾಟ್ಸ್ ಎಂಬ ಹೆಸರಾಂತ ರಿಯಲ್ ಎಸ್ಟೇಟ್ ಕಂಪನಿಯು ಈ ವ್ಯವಹಾರ ನೋಡಿಕೊಂಡಿದೆ. ಆರು ತಿಂಗಳ ಹಿಂದೆ ಅನುಷ್ಕಾ ಮತ್ತು ವಿರಾಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.