ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ ಪಿಎಸ್ಎಲ್ ನಲ್ಲಿ ಆಡ್ತಿದ್ದಾರೆ. ಈ ಮಧ್ಯೆ ಡೇಲ್ ಪಿಎಸ್ಎಲ್ ಹೊಗಳಿದ್ದಾರೆ. ಪಿಎಸ್ಎಲ್, ಐಪಿಎಲ್ ಗಿಂತ ಉತ್ತಮ ಲೀಗ್ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಐಪಿಎಲ್‌ಗಿಂತ ಪಿಎಸ್‌ಎಲ್‌ನಲ್ಲಿ ಆಡುವುದು ಹೆಚ್ಚು ಪ್ರಯೋಜನಕಾರಿ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ. ಪಿಎಸ್‌ಎಲ್‌ನಲ್ಲಿ ಐಪಿಎಲ್‌ಗಿಂತ ಕ್ರಿಕೆಟ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದಿದ್ದಾರೆ.
ಡೇಲ್ ಸ್ಟೇನ್ ಪಾಕಿಸ್ತಾನದ ಪತ್ರಿಕೆಯೊಂದರ ಜೊತೆ ಮಾತನಾಡುವ ವೇಳೆ ಈ ವಿಷ್ಯ ತಿಳಿಸಿದ್ದಾರೆ. ನೀವು ಐಪಿಎಲ್‌ಗೆ ಹೋದಾಗ ದೊಡ್ಡ ತಂಡಗಳು ಮತ್ತು ದೊಡ್ಡ ಆಟಗಾರರಿರುತ್ತಾರೆ. ಆಟಗಾರರ ಗಳಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೆಲವೊಮ್ಮೆ ಈ ಎಲ್ಲದರ ಮಧ್ಯೆ ಕ್ರಿಕೆಟ್ ಮರೆತುಹೋಗುತ್ತದೆ. ಆದ್ರೆ ಪಿಎಸ್ಎಲ್ ಮತ್ತು ಲಂಕಾ ಪ್ರೀಮಿಯರ್ ಲೀಗ್ ಆಡಲು ಹೋದಾಗ ಅಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗಾಗಿಯೇ ನಾನು ಐಪಿಎಲ್‌ನಿಂದ ದೂರವಿರಲು ಬಯಸಿದ್ದೇನೆ. ಆಟದ ಬಗ್ಗೆ ಹೆಚ್ಚು ಗಮನ ನೀಡಲು, ಪಿಎಸ್‌ಎಲ್‌ನಂತಹ ಪಂದ್ಯಾವಳಿಯಲ್ಲಿ ಆಡಲು ಬಯಸಿದ್ದೆ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.
ಒಂದಲ್ಲ ಎರಡಲ್ಲ 14 ಬಾರಿ ಗೆದ್ದಿದ್ದಾನೆ ಲಾಟರಿ…! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ʼರಹಸ್ಯʼ
ಡೇಲ್ ಸ್ಟೇನ್, ಐಪಿಎಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್, ಹೈದ್ರಾಬಾದ್, ಗುಜರಾತ್, ಬೆಂಗಳೂರು ತಂಡದಲ್ಲಿ ಆಡಿದ್ದಾರೆ. 2021ರಲ್ಲಿ ಸ್ಟೇನ್ ಐಪಿಎಲ್ ನಿಂದ ಹೊರಗಿದ್ದಾರೆ. 2020ರಲ್ಲಿ ಸ್ಟೇನ್ ಆಟ ಉತ್ತಮವಾಗಿರಲಿಲ್ಲ.