ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್, ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ ಮಾತ್ರ ಸೀಮಿತವಾಗಿರುವ ಗುಲಾಬಿ ಚೆಂಡನ್ನ ಎಲ್ಲಾ ಟೆಸ್ಟ್ ಪಂದ್ಯಕ್ಕೂ ಬಳಕೆ ಮಾಡಬೇಕು ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಂಪು ಚೆಂಡು 25 ಓವರ್ಗಳಾಗುತ್ತಿದ್ದಂತೆಯೇ ಮೃದುವಾಗಿ ಬಿಡುತ್ತೆ. ಹೀಗಾಗಿ ಗುಲಾಬಿ ಚೆಂಡನ್ನ ಬಳಸೋದೇ ಸೂಕ್ತ ಅಂತಾ ಸಲಹೆ ನೀಡಿದ್ದಾರೆ.
ನಾನು ಕಳೆದ ಕೆಲ ವರ್ಷಗಳಿಂದ ಇದನ್ನ ಹೇಳುತ್ತಲೇ ಬಂದಿದ್ದೇನೆ. ನನ್ನ ಪ್ರಕಾರ ಎಲ್ಲಾ ಟೆಸ್ಟ್ ಪಂದ್ಯಕ್ಕೂ ಗುಲಾಬಿ ಚೆಂಡನ್ನ ಬಳಸೋದು ಹೆಚ್ಚು ಸೂಕ್ತ. ಕೇವಲ ಹೊನಲು ಬೆಳಕಿನ ಆಟಕ್ಕೆ ಮಾತ್ರ ಗುಲಾಬಿ ಚೆಂಡನ್ನ ಸೀಮಿತ ಮಾಡಬಾರದು. ಗುಲಾಬಿ ಬಣ್ಣದ ಚೆಂಡು ಮೈದಾನದಲ್ಲಿರುವ ಪ್ರೇಕ್ಷಕರಿಗೆ ಟಿವಿಗಳಲ್ಲಿ ತುಂಬಾ ಸ್ಪಷ್ಟವಾಗಿ ಗೋಚರವಾಗುತ್ತೆ. ಅಲ್ಲದೇ ಗುಲಾಬಿ ಬಣ್ಣದ ಚೆಂಡು 60 ಓವರ್ಗಳವರೆಗೂ ಮೃದುವಾಗಲ್ಲ. ಇಷ್ಟೆಲ್ಲ ಪ್ರಯೋಜನ ಇದ್ದಮೇಲೆ ಟೆಸ್ಟ್ ಪಂದ್ಯಕ್ಕೆ ಗುಲಾಬಿ ಚೆಂಡನ್ನೇ ಫಿಕ್ಸ್ ಮಾಡಬಹುದಲ್ವಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.