alex Certify ಎಲ್ಲಾ ಮಾದರಿಯ ಕ್ರಿಕೆಟ್​ಗೆ ಪಾರ್ಥಿವ್​ ಪಟೇಲ್​ ವಿದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಾ ಮಾದರಿಯ ಕ್ರಿಕೆಟ್​ಗೆ ಪಾರ್ಥಿವ್​ ಪಟೇಲ್​ ವಿದಾಯ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2 ದಶಕಗಳ ಕಾಲ ವೃತ್ತಿಜೀವನ ನಡೆಸಿದ ಬಳಿಕ ಟೀಂ ಇಂಡಿಯಾದ ಮಾಜಿ ವಿಕೆಟ್​ ಕೀಪರ್​ ಪಾರ್ಥಿವ್​ ಪಟೇಲ್​ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ.

17ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪ್ರವೇಶ ಪಡೆದ ವಿಕೆಟ್​ ಕೀಪರ್​ ಹಾಗೂ ಬ್ಯಾಟ್ಸ್​ಮನ್​ ಇದೀಗ ತಮ್ಮ ಕ್ರಿಕೆಟ್​​ ಜೀವನಕ್ಕೆ ವಿದಾಯ ಹೇಳಿದ್ದಾರೆ. 35 ವರ್ಷದ ಆಟಗಾರ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಟಿಪ್ಪಣಿ ಬರೆಯುವ ಮೂಲಕ ನಿವೃತ್ತಿಯ ವಿಚಾರವನ್ನ ಬಹಿರಂಗಪಡಿಸಿದ್ದಾರೆ.

ಭಾರತೀಯ ತಂಡವನ್ನ ಪ್ರತಿನಿಧಿಸಲು ತಮ್ಮ 17ನೇ ವಯಸ್ಸಿನಲ್ಲೇ ನನ್ನ ಮೇಲೆ ನಂಬಿಕೆಯಿಟ್ಟಿದ್ದ ಬಿಸಿಸಿಐಗೆ ಪಾರ್ಥಿವ್​ ಧನ್ಯವಾದ ಹೇಳಿದ್ದಾರೆ. ಸೌರವ್​ ಗಂಗೂಲಿ, ಗುಜರಾತ್​ ಕ್ರಿಕೆಟ್​ ಅಸೋಸಿಯೇಷನ್​ ಸೇರಿದಂತೆ ವೃತ್ತಿ ಜೀವನಕ್ಕೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಪಾರ್ಥಿವ್ ಕೃತಜ್ಞತೆ ಸಮರ್ಪಿಸಿದ್ದಾರೆ.

ಪಾರ್ಥಿವ್​ ಕ್ರಿಕೆಟ್​ ಲೋಕದ ವಿದಾಯದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಟ್ವೀಟಿಗರು ಪಾರ್ಥೀವ್​ರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ

— parthiv patel (@parthiv9) December 9, 2020

https://twitter.com/RohitSh54376033/status/1336564395674009602

https://twitter.com/HRUDANANDABHUE8/status/1336572302356480000

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...