
ಮೆದುಳಿನ ಗಡ್ಡೆ ಸಮಸ್ಯೆಯಿಂದಾಗಿ ಸೈಮನ್ ಕಿಂಡಲ್ ಸೈಡ್ಸ್ ಸೊಂಟದ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಹೀಗಾಗಿ ಮಕ್ಕಳೊಂದಿಗೆ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಲಾಗದೇ ಕಷ್ಟ ಅನುಭವಿಸುತ್ತಿದ್ದರು.
ಆದರೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆತ ಈಗ ನಡೆಯೋದು ಮಾತ್ರವಲ್ಲದೇ ಲಘು ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಬಹುದಾಗಿದೆ. ಈ ರೊಬೊಟಿಕ್ ವಾಕಿಂಗ್ ಸಾಧನದ ಸಹಾಯದಿಂದ ಬರೋಬ್ಬರಿ 26.2 ಮೈಲಿ ದೂರ ಕ್ರಮಿಸುವ ಮೂಲಕ ಸಾಧನೆ ಮಾಡಿದ್ದಾರೆ. ಅಲ್ಲದೇ ಈ ವಾಕಿಂಗ್ ಸಾಧನ ಬಳಸಿ ಮರಳಿನ ಮೇಲೆ ನಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.