ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ ಬಂದಿದೆ. ಶೂಟರ್ ಸಿಂಗರಾಜ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಚಾವೊ ಯಾಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ. ಚೀನಾದ ಕ್ಸಿಂಗ್ ಹುವಾಂಗ್ ಚಿನ್ನದ ಪದಕ ಗೆದ್ದಿದ್ದಾರೆ.
ಶೂಟರ್ ಸಿಂಗರಾಜ್ ಒಟ್ಟು 216.8 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಇದು ಭಾರತದ ಎಂಟನೇ ಪದಕವಾಗಿದೆ. ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಇದು ಏಳನೇ ಪದಕವಾಗಿದ್ದು,7ನೇ ದಿನದ ಮೊದಲ ಪದಕವಾಗಿದೆ.