ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿಗೆ ಭಾರತ 267 ರನ್ ಗುರಿ ನೀಡಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 48.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 266 ರನ್ ಗಳಿಸಿದೆ.
ರೋಹಿತ್ ಶರ್ಮಾ 11, ಶುಭಮನ್ ಗಿಲ್ 10, ವಿರಾಟ್ ಕೊಹ್ಲಿ 4, ಶ್ರೇಯಸ್ ಅಯ್ಯರ್ 14, ಈಶಾನ್ ಕಿಶನ್ 82, ಹಾರ್ದಿಕ ಪಾಂಡ್ಯ 87, ರವೀಂದ್ರ ಜಡೇಜ 14, ಶಾರ್ದೂಲ್ ಠಾಕೂರ್ 3, ಕುಲದೀಪ್ ಯಾದವ್ 4, ಜಸ್ ಪ್ರೀತ್ ಬೂಮ್ರ 16, ಮೊಹಮ್ಮದ್ ಸಿರಾಜ್ 1 ರನ್ ಗಳಿಸಿದ್ದಾರೆ.
ಐದನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ನಡುವಿನ ಸೊಗಸಾದ ಶತಕದ ಜೊತೆಯಾಟ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ 66/4 ಆಗಿ ಸಂಕಷ್ಟದಲ್ಲಿದ್ದ ತಂಡಕ್ಕೆ ಪಾಂಡ್ಯ ಮತ್ತು ಇಶಾನ್ ಭರ್ಜರಿ ಅರ್ಧ ಶತಕ ಸಿಡಿಸುವ ಮೂಲಕ ನೆರವಾದರು. ಪಾಂಡ್ಯ 87 ರನ್ ಗಳಿಸಿದ್ದಾಗ ಇಶಾನ್ 82 ರನ್ ಗಳಿಸಿ ಔಟಾದರು. 239/5 ರಿಂದ ಭಾರತ ಮತ್ತೊಮ್ಮೆ ಸ್ಲಿಪ್ ಮಾಡಿ 266 ರನ್‌ಗಳಿಗೆ ಆಲೌಟ್ ಆಯಿತು. ಕೇವಲ 27 ರನ್‌ಗಳಿಗೆ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.
ಪಾಕಿಸ್ತಾನ ಪರವಾಗಿ ಶಾಹೀನ್ ಅಫ್ರಿದಿ 4 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಪಡೆದರು.