
ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ.
ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡ ಜಯಭೇರಿ ಬಾರಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತ್ತು. ಇಂಗ್ಲೆಂಡ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಪರವಾಗಿ ಮೊಹಮ್ಮದ್ ರಿಜ್ವಾನ್ 15, ಬಾಬರ್ ಆಜಮ್ 32, ಶಾನ್ ಮಸೂದ್ 38, ಶಾದಾಬ್ ಖಾನ್ 20 ರನ್ ಗಳಿಸಿದರು. ಇಂಗ್ಲೆಂಡ್ ತಂಡದ ಪರ ಸ್ಯಾಮ್ ಕರೆನ್ 3, ಆದಿಲ್ ರಶೀದ್ 2, ಕ್ರಿಸ್ ಜೋಡಾನ್ 2 ವಿಕೆಟ್ ಪಡೆದರು. 138 ರನ್ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ ಸ್ಟೋಕ್ಸ್ 52 ರನ್ ಗಳಿಸಿದರು. ಜೋಸ್ ಬಟ್ಲರ್ 26, ಹೇರಿ ಬ್ರೂಕ್ 20, ಮೊಯಿನ್ ಅಲಿ 19 ರನ್ ಗಳಿಸಿದರು.