ಕ್ರೀಡಾ ಲೋಕದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕುಸ್ತಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಸೋತ ನಂತರ ಭಾರತದ ಮಹಿಳಾ ಕುಸ್ತಿಪಟು ರಿತಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿತಿಕಾ, ಬಬಿತಾ ಫೋಗಟ್ ಮತ್ತು ಗೀತಾ ಫೋಗಟ್ ಸಹೋದರ ಸಂಬಂಧಿ. ಬಾಲಾಲಿ ಗ್ರಾಮದಲ್ಲಿ ಸೋಮವಾರ ರಾತ್ರಿ ರಿತಿಕಾ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 12 ರಿಂದ 14 ರವರೆಗೆ ರಾಜಸ್ಥಾನದ ಭಾರತ್ಪುರದಲ್ಲಿ ನಡೆದ ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ರಿತಿಕಾ ಭಾಗವಹಿಸಿದ್ದರು. ಮಾರ್ಚ್ 14 ರಂದು ಅಂತಿಮ ಪಂದ್ಯ ನಡೆದಿತ್ತು. ಇದರಲ್ಲಿ ರಿತಿಕಾ ಒಂದು ಪಾಯಿಂಟ್ನಿಂದ ಪಂದ್ಯವನ್ನು ಸೋತಿದ್ದರು.
ಈ ಸೋಲಿನ ನಂತರ ಅವರು ಆಘಾತಕ್ಕೊಳಗಾಗಿದ್ದರು. ಮಾರ್ಚ್ 15 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಕಾರ್ಫ್ ನಿಂದ ನೇಣು ಬಿಗಿದುಕೊಂಡಿದ್ದಾರೆ. ರಾಜಸ್ಥಾನದ ಜೈತ್ಪುರ ಗ್ರಾಮದ ನಿವಾಸಿ 17 ವರ್ಷದ ರಿತಿಕಾ, ಕುಸ್ತಿ ಅಕಾಡೆಮಿಯಲ್ಲಿ ಸುಮಾರು 5 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದರು. ರಿತಿಕಾ ಈವರೆಗೆ ಸುಮಾರು 4 ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.