
ಸ್ವಾತಂತ್ರ‍್ಯ ದಿನಾಚರಣೆ ಸಂದರ್ಭದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎಲ್ಲೆಡೆಯಿಂದ ಭಾವನಾತ್ಮಕ ಸ್ಪಂದನೆ ಸಿಕ್ಕಿದೆ.
ಈ ಬ್ಯಾಂಡ್ ವ್ಯಾಗನ್ ಅನ್ನು ಸೇರಿಕೊಂಡಿರುವ ಟೀಂ ಇಂಡಿಯಾದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್, “ಧೋನಿ ಅವರಂತಹ ಆಟಗಾರರನ್ನು ಹೊಂದುವುದು ಅಸಾಧ್ಯ. ಎಂ.ಎಸ್. ಥರ ಯಾರೂ ಇಲ್ಲ, ಇರಲಿಲ್ಲ ಹಾಗೂ ಬರುವುದಿಲ್ಲ. ಆಟಗಾರರು ಬರುತ್ತಾರೆ ಹೋಗುತ್ತಾರೆ, ಆದರೆ ಅವರಂತೆ ಕಾಮ್ ಆಗಿರಲು ಸಾಧ್ಯವಿಲ್ಲ. ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಜನರೊಂದಿಗೆ ಬಹಳ ಆಳವಾದ ಕನೆಕ್ಟ್ ಹೊಂದಿರುವ ಧೋನಿ, ಬಹಳಷ್ಟು ಮಂದಿ ಕ್ರಿಕೆಟ್ ಪ್ರೇಮಿಗಳಿಗೆ ಕುಟುಂಬದ ಸದಸ್ಯರಿದ್ದಂತೆ. ಓ ಫಿನಿಶಾಯ ನಮಃ” ಎಂದು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸೆಹ್ವಾಗ್ ಮಾತ್ರವಲ್ಲದೇ, ಸೌರವ್ ಗಂಗೂಲಿಯಿಂದ ಹಾರ್ದಿಕ್ ಪಾಂಡ್ಯಾವರೆಗೂ, ಧೋನಿ ಜೊತೆಗೆ ಆಡಿರುವ ಬಹಳಷ್ಟು ಮಂದಿ ಆಟಗಾರರು ಧೋನಿಗೆ ಭಾವಪೂರ್ಣ ಬೀಳ್ಕೊಡುಗೆ ಕೊಟ್ಟಿದ್ದಾರೆ.