ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನದ ಪದಕವನ್ನು ಚೀನಾದ ಯಾಂಗ್ ಕಿಯಾನ್ ಗಳಿಸಿದ್ದಾರೆ. 10 ಎಂ ಏರ್ ರೈಫಲ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಜೇತರಾದ ಚೀನಾದ ಕಿಯಾನ್ ಟೊಕಿಯೋ ಒಲಿಂಪಿಕ್ಸ್ ನ ಮೊದಲ ಚಿನ್ನ ಪದಕವನ್ನು ತಮ್ಮದಾಗಿಸಿಕೊಂಡರು.
ಒಲಂಪಿಕ್ಸ್ ನಲ್ಲಿ ದಾಖಲೆಯ 251.8 ಅಂಕ ಕಲೆಹಾಕಿದ ಕಿಯಾನ್ ಸಾಧನೆ ಮಾಡಿ, ಟೋಕಿಯೋ ಒಲಿಂಪಿಕ್ ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಸ್ಪರ್ಧಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ಶೂಟರ್ ಗಳು ಕಳಪೆ ಪ್ರದರ್ಶನ ನೀಡಿದ್ದಾರೆ.
ಎಲವೆನಿಲ್ ವಲರಿವನ್, ಅಪೂರ್ವಿ ಚಾಂಡೇಲಾ ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. ರಷ್ಯಾದ ಗಲಾಸಿನ ಮತ್ತು ಸ್ವಿಟ್ಜರ್ ಲೆಂಡ್ ನೀನಾ ಕ್ರಿಸ್ಟಿಯನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.
ಇನ್ನು ಆರ್ಚರಿ ಮಿಶ್ರ ಡಬಲ್ಸ್ ನಯಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದಾರೆ.