ಜಗತ್ತಿನ ಅತ್ಯಂತ ಹಿರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ಹಿಟ್ಲರನ ನಾಝೀ ಪಡೆಯ ’ಹೋಲೋಕಾಸ್ಟ್’ ಚಿತ್ರಹಿಂಸೆಯನ್ನು ಗೆದ್ದು ಬಂದ ಮೃತ್ಯುಂಜಯಿ ಆಗಿರುವ ಹಂಗೇರಿಯ ಜಿಮ್ನಾಸ್ಟ್ ಅಗ್ನೇಸ್ ಕೆಲೆಡಿ ಇನ್ನೇನು ಸೆಂಚುರಿ ಬಾರಿಸಲಿದ್ದಾರೆ.
ತಮ್ಮ ದೀರ್ಘಾಯುಷ್ಯದ ಕುರಿತು ಮಾತನಾಡಿರುವ ಅಗ್ನೇಸ್, “ನನಗೆ ಹಿತಾನುಭವಗಳು ಆಗುತ್ತವೆ. ಆದರೆ ನಾನು ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದಿಲ್ಲ, ಅದು ನನ್ನ ಟ್ರಿಕ್” ಎಂದಿದ್ದಾರೆ.
ಯಹೋದಿಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಅಥ್ಲೀಟ್‌ಗಳಲ್ಲಿ ಒಬ್ಬರಾದ ಅಗ್ನೇಸ್, ಹಂಗೆರೆಯ ಅತ್ಯಂತ ಯಶಸ್ವೀ ಅಥ್ಲೀಟ್ ಆಗಿದ್ದಾರೆ.
ಜನವರಿ 9, 1921ರಲ್ಲಿ ಜನಿಸಿದ ಅಗ್ನೇಸ್, ಒಲಿಂಪಿಕ್ಸ್ ಕ್ರೀಡಾಕೂಟಗಳ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಒಟ್ಟಾರೆ 10 ಪದಕಗಳನ್ನು ಗೆದ್ದಿದ್ದಾರೆ. ಇವುಗಳ ಪೈಕಿ ಹೆಲ್ಸಿಂಕಿ (1952) ಹಾಗೂ ಮೆಲ್ಬರ್ನ್ (1956) ಕೂಟಗಳಲ್ಲಿ ಐದು ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದರು ಅಗ್ನೇಸ್.