
ಕ್ರೀಡಾ ಜಗತ್ತಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅರ್ಜೆಂಟಿನಾದ ಡಿಯಾಗೋ ಮರಡೋನಾ ಸಾವಿನ ಬಳಿಕ ಅವರ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಟರ್ಕಿಯ ಪ್ರಖ್ಯಾತ ಶೆಫ್ ನುಸ್ರತ್ ಗಾಕೆ ಅಲಿಯಾಸ್ ಸಾಲ್ಟ್ ಬೇ ಜೊತೆಗೆ ಮರಡೋನಾ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ.
ನುಸ್ರ್-ಎಟ್ ಸ್ಟೀಕ್‌ಹೌಸ್‌ಗಳ ಮುಖಾಂತರ ಹೆಸರು ಮಾಡಿರುವ ಸಾಲ್ಟ್ ಬೇ, ಫುಟ್ಬಾಲ್ ಸ್ಟಾರ್‌ನ ಟೇಬಲ್ ಮೇಲಕ್ಕೆ ಖುದ್ದು ತಾವೇ ಸ್ಟೀಕ್‌ಗಳನ್ನು ತಂದು ಅವುಗಳಿಂದ ಬೋನ್‌ಗಳನ್ನು ಬೇರ್ಪಡಿಸುತ್ತಿರುವುದನ್ನು ನೋಡಬಹುದಾಗಿದೆ.
ತಮ್ಮ ಮೆಚ್ಚಿನ ಶೆಫ್‌ನ ಈ ನಡೆಯಿಂದ ಭಾರೀ ಖುಷ್ ಆದ ಮರಡೋನಾ ಖುದ್ದು ಸಾಲ್ಟ್ ಬೇಗೆ ತಾವೇ ಫ್ಯಾನ್ ಎಂಬಂತೆ ಖುಷಿ ಪಡುತ್ತಿರುವುದನ್ನು ಕಾಣಬಹುದಾಗಿದೆ. ಮರಡೋನಾ ನಿಧನರಾಗಿ ಎರಡು ದಿನಗಳ ಬಳಿಕ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಅದಾಗಲೇ 35 ಲಕ್ಷ ಬಾರಿ ವೀವ್ ಮಾಡಲಾಗಿದೆ.
https://www.instagram.com/p/Bg0i6jyFv-r/?utm_source=ig_web_copy_link