ಅಹಮದಾಬಾದ್: ಅಹಮದಾಬಾದ್ ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಇಂದು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯ ನಡೆಯಲಿದೆ. ಈಗಾಗಲೇ 2 -0 ಅಂತರದಿಂದ ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಮೂರನೇ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ.
ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ 2 ಮತ್ತು ಎರಡನೇ ಪಂದ್ಯದಲ್ಲಿ 4 ವಿಕೆಟ್ ಗಳಿಸಿದ್ದ ಪ್ರಸಿದ್ಧ್ ಕೃಷ್ಣ ಬೌಲಿಂಗ್ ವಿಭಾಗಕ್ಕೆ ಬಲ ತಂದಿದ್ದಾರೆ.
ಉಭಯ ತಂಡಗಳು 135 ಸಲ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ 66 ಹಾಗೂ ವೆಸ್ಟ್ ಇಂಡೀಸ್ 63 ಸಲ ಗೆಲುವು ಕಂಡಿವೆ. ಎರಡು ಪಂದ್ಯ ಟೈ ಆಗಿದ್ದು, ನಾಲ್ಕು ಪಂದ್ಯಗಳ ಫಲಿತಾಂಶ ಬಂದಿಲ್ಲ. ಇಂದು ಮಧ್ಯಾಹ್ನ 1.30 ಪಂದ್ಯ ಆರಂಭವಾಗಲಿದೆ.