ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಐತಿಹಾಸಿಕ ಗೆಲುವನ್ನ ದಾಖಲಿಸಿದ ಮೂಲಕ ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನ ಗೆದ್ದಿದ್ದಾರೆ.
ವಿರಾಟ್ ಕೊಹ್ಲಿ ಪಿತೃತ್ವ ರಜೆಯಲ್ಲಿದ್ದ ಕಾರಣ ರಹಾನೆ ಟೀಂ ಇಂಡಿಯಾ ಸಾರಥ್ಯವನ್ನ ವಹಿಸಿದ್ದರು. ಫೆಬ್ರವರಿ 5ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಮೊದಲಿನಂತೆಯೇ ಉಪನಾಯಕನ ಹುದ್ದೆಯನ್ನ ನಿಭಾಯಿಸಲಿದ್ದಾರೆ.
ಫಿಕ್ಸಿಂಗ್ ಆರೋಪದಡಿ ಇಬ್ಬರು ಕ್ರಿಕೆಟಿಗರ ಅಮಾನತು
ಆದರೆ ಈ ನಡುವೆ ವಿರಾಟ್ ಹಾಗೂ ಅಜಿಂಕ್ಯ ರಹಾನೆ ನಡುವೆ ಕ್ಯಾಪ್ಟನ್ಸಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆಯಾ ಎಂಬ ಪ್ರಶ್ನೆ ಕ್ರಿಕೆಟ್ ಲೋಕದಲ್ಲಿ ತುಂಬಾನೆ ಹರಿದಾಡುತ್ತಿದೆ . ಈ ವಿಚಾರವಾಗಿ ಸ್ವತಃ ರಹಾನೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಹಾಗೂ ಕೊಹ್ಲಿ ನಡುವೆ ಯಾವುದೇ ಬದಲಾವಣೆ ಆಗಿಲ್ಲ. ಕೊಹ್ಲಿ ಟೀಂ ಇಂಡಿಯಾದ ನಾಯಕರಾಗಿಯೇ ಮುಂದುವರಿಯಲಿದ್ದಾರೆ. ಹಾಗೂ ನಾನು ಉಪನಾಯಕ ಜವಾಬ್ದಾರಿ ಹೊರಲಿದ್ದೇನೆ. ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುಂದಾಳತ್ವ ವಹಿಸೋದು ನನ್ನ ಕರ್ತವ್ಯವಾಗಿತ್ತು. ಎಂದಿದ್ದಾರೆ.
ಅಲ್ಲದೇ ತಂಡದ ನಾಯಕನಾಗಿದ್ದೇನೆ ಅನ್ನೋದು ಮುಖ್ಯವಲ್ಲ. ನಾಯಕನಾದ ಬಳಿಕ ತಂಡವನ್ನ ಹೇಗೆ ಮುನ್ನಡೆಸುತ್ತೇವೆ ಅನ್ನೋದು ಮುಖ್ಯವಾಗುತ್ತೆ. ನನ್ನ ಹಾಗೂ ವಿರಾಟ್ ಸಂಬಂಧ ಚೆನ್ನಾಗಿಯೇ ಇದೆ. ನನ್ನ ಬ್ಯಾಟಿಂಗ್ ಶೈಲಿಯನ್ನ ಕೊಹ್ಲಿ ಹೊಗಳಿದ್ದಾರೆ ಎಂದು ಚೆನ್ನೈನಲ್ಲಿ ಹೇಳಿದ್ರು.