ಐಪಿಎಲ್ನಲ್ಲಿ ತಮ್ಮ ಮೊದಲ ಕಾಂಟ್ರಾಕ್ಟ್ ಪಡೆದುಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ತಮ್ಮ ಮೂಲ ಬೆಲೆ 20 ಲಕ್ಷ ರೂ.ಗಳಿಗೆ ಬಿಕರಿಯಾಗಿದ್ದಾರೆ.
ಹರಾಜಿನ ಮೊದಲ ಐದು ಗಂಟೆಗಳಲ್ಲಿ ಅರ್ಜುನ್ ಹೆಸರು ಕೇಳದೇ ಇದ್ದ ಕಾರಣ ಆತ ಬಿಕರಿಯಾಗುವುದಿಲ್ಲ ಎಂದು ಭಾವಿಸಲಾಗಿತ್ತು.
ಆದರೆ ಕೊನೆಯಲ್ಲಿ ಮುಂಬೈ, ಅರ್ಜುನ್ ಹೆಸರನ್ನು ಹೇಳಿ, ದಿನದ ಕೊನೆಯ ಆಟಗಾರನಾಗಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿರುವ ಅರ್ಜುನ್ರ ಖರೀದಿ ಯಾರಿಗೂ ಅಚ್ಚರಿ ಮೂಡಿಸಿಲ್ಲ. 2020 ರ ಐಪಿಎಲ್ನಲ್ಲಿ ತಮ್ಮ ತಂಡದೊಂದಿಗೆ ನೆಟ್ ಬೌಲರ್ ಆಗಿ ಯುಎಇಗೆ ತೆರಳಿದ್ದರು ಅರ್ಜುನ್.
ಫೆ. 24ರಿಂದ ಸ್ಥಗಿತಗೊಳ್ಳಲಿದೆ ಗೂಗಲ್ ನ ಈ ಸೇವೆ; ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ
ತನ್ನ ಸಹೋದರನಿಗೆ ಐಪಿಎಲ್ ಕಾಂಟ್ರಾಕ್ಟ್ ಸಿಗುತ್ತಲೆ ಇನ್ಸ್ಟಾಗ್ರಾಂನಲ್ಲಿ ಶುಭಾಶಯ ಕೋರಿದ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್, “ನಿನ್ನ ಈ ಸಾಧನೆಯನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಇದು ನಿನ್ನದು” ಎಂದು ಬರೆದಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ ಅರ್ಜುನ್, ಬ್ಯಾಟಿಂಗ್ನಲ್ಲೂ ಅಷ್ಟೋ ಇಷ್ಟೋ ಕೊಡುಗೆ ಕೊಡಬಲ್ಲವರಾಗಿದ್ದಾರೆ.