ಮೌಂಟ್ ಮಾಂಗನುಯಿ: ವೆಲ್ಲಿಂಗ್ಟನ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಬೇ ಓವಲ್ ಮೈದಾನದಲ್ಲಿ ನಡೆದಿರುವ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಇಶಾನ್ ಕಿಶನ್ 36, ರಿಷಬ್ ಪಂತ್ 6, ಸೂರ್ಯಕುಮಾರ್ ಯಾದವ್ ಅಜೇಯ 111, ಶ್ರೇಯಸ್ ಅಯ್ಯರ್ 13, ಹಾರ್ದಿಕ್ ಪಾಂಡ್ಯ 13, ದೀಪಕ್ ಹೂಡಾ 0, ವಾಷಿಂಗ್ಟನ್ ಸುಂದರ್ 0, ಭುವನೇಶ್ವರ್ ಕುಮಾರ್ ಅಜೇಯ 1 ರನ್ ಗಳಿಸಿದ್ದಾರೆ. ಭಾರತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ಲುಕಿ ಫೆರ್ಗುಸನ್ 2, ಇಶ್ ಸೋದಿ 1, ಟಿಮ್ ಸೋದಿ 3 ವಿಕೆಟ್ ಪಡೆದರು. 192 ರನ್ ಗೆಲುವಿನ ಗುರಿ ಪಡೆದ ನ್ಯೂಜಿಲೆಂಡ್ ಬ್ಯಾಟಿಂಗ್ ಆರಂಭಿಸುವ ಮೊದಲೇ ಮೊದಲ ವಿಕೆಟ್ ಕಳೆದುಕೊಂಡಿದೆ.